ಕುಶಾಲನಗರ, ಜು 06: ದಿನಾಂಕ: 05-07-2025 ರಂದು ಮಧ್ಯಾಹ್ನ ಸುಮಾರು 02.30 ಘಂಟೆ ಸಮಯದಲ್ಲಿ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ಗುಡ್ಡೆಹೊಸೂರು – ಸಿದ್ದಾಪುರ ರಸ್ತೆಯ ತೆಪ್ಪದಕಂಡಿ ಸೇತುವೆ ಸಮೀಪ ಕೆಎ 12 ಸಿ 4220 ವಿವೇಕಾನಂದ ಕಾಲೇಜು ಬಸ್‌ನ ಹಿಂಬದಿಗೆ ಕೆಎ 12 ಬಿ 8762 ರ ಮಹೀಂದ್ರಾ ಪಿಕಪ್ ಡಿಕ್ಕಿ ಪಡಿಸಿ ಜಖಂಗೊಂಡಿದ್ದು, ಅಪಘಾತ ಪಡಿಸಿದ ಕೆಎ 12 ಬಿ 8762 ದ ಪಿಕಪ್ ಚಾಲಕನಾದ ತೀರ್ಥಪ್ರಸಾದ್ ಎಂಬಾತನು ಮದ್ಯಪಾನ ಮಾಡಿ ವಾಹನ ಚಲಾಯಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಕಂಡುಬಂದಿರುತ್ತದೆ.
ಮಧ್ಯಪಾನ ಮಾಡಿ ರಸ್ತೆಯಲ್ಲಿ ವಾಹನ ಚಲಾಯಿಸುವ ಸಂದರ್ಭ ಅಪಘಾತವಾದಲ್ಲಿ ಜೀವಕ್ಕೆ ಹಾನಿಯುಂಟಾಗುವ ಬಗ್ಗೆ ಅರಿವಿದ್ದರೂ ಸಹ ಮಧ್ಯಪಾನ ಮಾಡಿ ಅತೀವೇಗ ೩ ಅಜಾಗೂಕತೆಯಿಂದ ವಾಹನ ಚಾಲನೆ ಮಾಡಿ ಬಸ್‌ಗೆ ಡಿಕ್ಕಿಪಡಿಸಿರುವ ಕೆಎ-12 ಬಿ 8762 ಪಿಕಪ್ ಚಾಲಕನಾದ ತೀರ್ಥಪ್ರಸಾದ್ ವಿರುದ್ಧ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕಲಂ: 281, 110 ಬಿ.ಎನ್.ಎಸ್ ಆಕ್ಟ್ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ ಹಾಗೂ ಗೊಂದಿಬಸವನಹಳ್ಳಿ ಗ್ರಾಮದ ನಿವಾಸಿಯಾದ ಆರೋಪಿ ತೀರ್ಥ ಪ್ರಸಾದ್, 51 ವರ್ಷ ಎಂಬಾತನನ್ನು ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ.
> ವಾಹನ ಚಾಲಕರು ಮಧ್ಯಪಾನ ಮಾಡಿ ವಾಹನ ಚಾಲನೆ ಮಾಡಿದರೆ ಅಪಘಾತ ಸಂಭವಿಸುವ ಹಾಗೂ ಆಪಘಾತದಲ್ಲಿ ಜೀವಕ್ಕೆ ಹಾನಿಯಾಗುವ ಬಗ್ಗೆ ಆರಿವಿದ್ದರೂ ಸಹ ಮಧ್ಯಪಾನ ಮಾಡಿ ವಾಹನ ಚಲಾಯಿಸಿ ಅಪಘಾತ ಪಡಿಸಿದ್ದಲ್ಲಿ ಕೊಲೆಯಲ್ಲದ ಅಪರಾಧಿಕ ನರಹತ್ಯೆ(Culpable Homicide)ಯನ್ನು ಮಾಡುವ ವ್ಯಕ್ತಿಗೆ ಕನಿಷ್ಠ 03 ವರ್ಷಗಳ ಜೈಲು ಶಿಕ್ಷೆಯನ್ನು ಅಥವಾ ಗರಿಷ್ಠ 07 ಜೈಲು ಶಿಕ್ಷೆಯನ್ನು ವಿಧಿಸಬಹುದಾಗಿರುತ್ತದೆ.
Back to top button
error: Content is protected !!