ಪ್ರಕಟಣೆ

ಪೊನ್ನಂಪೇಟೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ: ಸೆ.23 ರ ಸಂಜೆ 6 ರಿಂದ ವಾಹನ ಸಂಚಾರ ಮಾರ್ಗ ಬದಲಾವಣೆ

ಮಡಿಕೇರಿ ಸೆ.22:-ಪೊನ್ನಂಪೇಟೆ ನಗರದಲ್ಲಿ ಸೆ.23ರಂದು ಸಂಜೆ 6 ಗಂಟೆಯಿಂದ ಸೆ.24ರ ಬೆಳಗ್ಗೆ 6 ಗಂಟೆಯವರೆಗೆ ಗಣಪತಿ ಮೂರ್ತಿಗಳ ಸಾಮೂಹಿಕ ವಿಸರ್ಜನೆ ಕಾರ್ಯಕ್ರಮ ನಡೆಯಲಿರುವ ಹಿನ್ನೆಲೆಯಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ಮಾರ್ಗ ಬದಲಾವಣೆ ಮಾಡಲಾಗಿದೆ.
ಸುಮಾರು 9 ಮಂಟಪಗಳ ಮೆರವಣಿಗೆ ನಗರದ ಮುಖ್ಯ ಬೀದಿಯಲ್ಲಿ ನಡೆಯಲಿದ್ದು, 5,000ರಿಂದ 6,000 ಮಂದಿ ಭಾಗವಹಿಸುವ ನಿರೀಕ್ಷೆಯಿದೆ. ಮೆರವಣಿಗೆ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸೇರುವುದರಿಂದ ಮುಖ್ಯ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಡಕು ಉಂಟಾಗುವ ಹಾಗೂ ಅಪಘಾತ ಸಂಭವಿಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ.
ಸಾರ್ವಜನಿಕರು ಮತ್ತು ವಾಹನ ಸವಾರರ ಸುರಕ್ಷತೆ, ಕಾನೂನು ಮತ್ತು ಸುವ್ಯವಸ್ಥೆ ಹಾಗೂ ಸುಗಮ ಸಂಚಾರದ ದೃಷ್ಟಿಯಿಂದ ಕೊಡಗು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಸೋಮಶೇಖರ್ ಎಸ್.ಜಿ., ಭಾ.ಅ.ಸೇ. ಅವರು ಮೋಟಾರು ವಾಹನಗಳ ಕಾಯ್ದೆ 1988ರ ಕಲಂ 115 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989ರ ನಿಯಮ 221ಎ(5)ರಡಿ ಆದೇಶ ಹೊರಡಿಸಿದ್ದಾರೆ.
ಮೈಸೂರಿನಿಂದ –ತಿತಿಮತಿ–ಪೆÇನ್ನಂಪೇಟೆ ಮಾರ್ಗವಾಗಿ ಕುಟ್ಟ ಕಡೆಗೆ ತೆರಳುವ ವಾಹನಗಳಿಗೆ ತಿತಿಮತಿ, ಪೆÇನ್ನಪ್ಪಸಂತೆ, ಬಾಳಲೆ, ಕಾನೂರು ಮಾರ್ಗವಾಗಿ ಕುಟ್ಟ ಕಡೆಗೆ ಸಂಚರಿಸಬೇಕು.
ಕುಟ್ಟ ಕಡೆಯಿಂದ ಪೆÇನ್ನಂಪೇಟೆ–ಗೋಣಿಕೊಪ್ಪ–ತಿತಿಮತಿ–ಮೈಸೂರು ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳಿಗೆ ಕುಟ್ಟ, ಕಾನೂರು, ಬಾಳಲೆ, ಪೆÇನ್ನಪ್ಪಸಂತೆ, ತಿತಿಮತಿ ಮಾರ್ಗವಾಗಿ ಮೈಸೂರು ಕಡೆಗೆ ತೆರಳಬೇಕು.
ಶ್ರೀಮಂಗಲ ಕಡೆಯಿಂದ ಪೆÇನ್ನಂಪೇಟೆ–ಗೋಣಿಕೊಪ್ಪ–ತಿತಿಮತಿ ಮಾರ್ಗವಾಗಿ ಮೈಸೂರಿಗೆ ಹೋಗುವ ವಾಹನಗಳು ಪೆÇನ್ನಂಪೇಟೆ ನಗರದ ಕಾನೂರು ಜಂಕ್ಷನ್‍ನಿಂದ ಕಾನೂರು, ಬಾಳಲೆ, ಪೆÇನ್ನಪ್ಪಸಂತೆ, ತಿತಿಮತಿ ಮಾರ್ಗವಾಗಿ ಮೈಸೂರು ಕಡೆಗೆ ಸಂಚರಿಸಬೇಕು.
ವಿರಾಜಪೇಟೆ ಕಡೆಯಿಂದ ಕುಟ್ಟ ಕಡೆಗೆ ತೆರಳುವ ವಾಹನಗಳಿಗೆ ಹಾತೂರು ಜಂಕ್ಷನ್, ಕುಂದಾ, ಸಿ.ಐ.ಟಿ. ಕಾಲೇಜು ಜಂಕ್ಷನ್, ಬೇಗೂರು ಮಾರ್ಗವಾಗಿ ಕುಟ್ಟ ಕಡೆಗೆ ಹೋಗುವುದು ಹಾಗೂ ಬರುವುದು.
ಈ ಮೇಲಿನ ಸಂಚಾರ ನಿಯಮಗಳಿಗೆ ಏನಾದರೂ ವ್ಯತ್ಯಾಸ ಅಥವಾ ಮಾರ್ಪಾಡು ಇದ್ದರೆ ಆಯಾಯ ಸ್ಥಳದಲ್ಲಿ ಇರುವ ಪೊಲೀಸರು ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದು. ಇದರೊಂದಿಗೆ ಸನ್ನಿವೇಶಕ್ಕೆ ತಕ್ಕಂತೆ ಅವಶ್ಯಕತೆ ಇದ್ದರೆ ಸಣ್ಣ ಪುಟ್ಟ ಮಾರ್ಪಾಡುಗಳನ್ನು ಮಾಡಲು ಪೊಲೀಸ್ ಅಧಿಕಾರಿಗಳಿಗೆ ಅನುಮತಿಸಿದೆ.
ಈ ಬಗ್ಗೆ ಮೋಟಾರು ವಾಹನಗಳ ಕಾಯ್ದೆ 1988 ರ ಕಲಂ 116 ಹಾಗೂ ಕರ್ನಾಟಕ ಮೋಟಾರು ವಾಹನಗಳ ನಿಯಮಗಳು 1989 ರ (ತಿದ್ದುಪಡಿ ನಿಯಮಗಳು 1990) ನಿಯಮ 221 ಎ(2) ರಂತೆ ಅವಶ್ಯವಿರುವ ಸಂಜ್ಞೆ ಸೂಚನಾ ಫಲಕವನ್ನು ಅಳವಡಿಸಲು ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ ಮಡಿಕೇರಿ ಇವರಿಗೆ ಅಧಿಕಾರ ನೀಡಿದೆ. ಈ ವಾಹನ ಸಂಚಾರ ನಿಯಮವು ಸೆಪ್ಟೆಂಬರ್, 23 ರ ಸಂಜೆ 6 ಗಂಟೆಯಿಂದ ಸೆಪ್ಟೆಂಬರ್, 24 ರ ಬೆಳಗ್ಗೆ 6 ಗಂಟೆಯವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿ ಎಸ್.ಎಜ್.ಸೋಮಶೇಖರ್ ಅವರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!