ಕುಶಾಲನಗರ, ಜೂ 15:ಕೊಡಗು ಜಿಲ್ಲೆ ಸೋಮವಾರಪೇಟೆ ತಾಲೂಕು ಯಡವನಾಡು ಗ್ರಾಮದ ಹಾರಂಗಿ ಅಣೆಕಟ್ಟೆಯ ಎಡ ಭಾಗದಲ್ಲಿ ದೊಡ್ಡ ಮಟ್ಟದ ಮಣ್ಣು ಮಾಫಿಯಾ ನಿರಂತರವಾಗಿ ನಡೆಯುತ್ತಿದೆ. ಇಲ್ಲಿ ಹೇಳುವವರು ಕೇಳುವವರು ಯಾರು ಇಲ್ಲದಂತಾಗಿದೆ ಎಂದು ಸ್ಥಳೀಯ ಕೆಲವರು ಆರೋಪಿಸಿದ್ದಾರೆ. ಸಂಬಂಧಪಟ್ಟ ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಕಂದಾಯ ಇಲಾಖೆ, ಅರಣ್ಯ ಇಲಾಖೆ, ಹಾರಂಗಿ ನೀರಾವರಿ ಇಲಾಖೆ ಮತ್ತು ಗ್ರಾಮ ಪಂಚಾಯಿತಿ ಎಲ್ಲವೂ ಕೂಡ ಕಣ್ಣು ಮುಚ್ಚಿ ಕುಳಿತಿರುವ ಕಾರಣ ಮಣ್ಣು ಮಾಫಿಯಾ ಗಳು ದೊಡ್ಡ ದೊಡ್ಡ ಇಟಾಚಿಗಳ ಮುಖಾಂತರ ದೊಡ್ಡ ಬೆಟ್ಟದ ಎದೆಯನ್ನು ಸೀಳಿ ಮಣ್ಣನ್ನು ಮಾರುವಂತಾಗಿದೆ. ಹಾರಂಗಿ ಅಣೆಕಟ್ಟೆಯ ಎಡಭಾಗದಲ್ಲಿ ಕೇವಲ 300 ರಿಂದ 400 ಮೀಟರ್ ದೂರದಲ್ಲಿ ನಡೆದಿರುವ ಕ್ರೂರ ಕೃತ್ಯ ಇದಾಗಿದ್ದು, ಹೀಗೆನೇ ಇವರು ಮುಂದುವರೆದು ಮಣ್ಣನ್ನು ತೆಗೆದರೆ ಮುಂದಿನ ದಿನಗಳಲ್ಲಿ ಅಣೆಕಟ್ಟೆಗೂ ಕೂಡ ಸಮಸ್ಯೆ ಆಗಬಹುದು ಎಂಬ ಭಯ ಸಹಜವಾಗಿ ಈ ಭಾಗದ ಜನರಲ್ಲಿ ಮೂಡಿದೆ. ದೊಡ್ಡ ಮಟ್ಟದಲ್ಲಿ ಬೀಟೆ ಮತ್ತು ತೇಗದ ಮರಗಳನ್ನು ಕೂಡ ಕಡಿದು ಆಯ್ದ ಭಾಗಗಳನ್ನು ತೆಗೆದುಕೊಂಡು ಬಾಕಿ ಮಣ್ಣಿನೊಳಗೆ ಹೂತು ಹಾಕುವಂಥ ಕೆಲಸ ನಡೆದಿದೆ. ಈ ಬೆಟ್ಟವನ್ನು ಅವಲಂಬಿಸಿದ ಜೀವಚರಗಳು ಸತ್ತು ಮಣ್ಣಾಗಿದೆ. ಕೋಟಿ ಗಟ್ಟಲೆ ಖರ್ಚು ಮಾಡಿ ನಿರ್ಮಿಸಿದ ಕಾಂಕ್ರೀಟ್ ರಸ್ತೆಗಳು ಘಟನ ವಾಹನಗಳು ಓಡಾಡುವುದರಿಂದ ಹಾಳಾಗುತ್ತಿವೆ. ಇದನ್ನು ಪ್ರಶ್ನಿಸಿದರೆ ಜಾಗದ ಮಾಲೀಕರ ಸಹಕಾರವಿದ್ದರೆ ಸಾಕು ಯಾರ ಅಪ್ಪಣೆಯು ಬೇಕಿಲ್ಲ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಇದರಿಂದಾಗಿ ಯಾರು ಕೂಡ ಪ್ರಶ್ನಿಸಲು ಮುಂದೆ ಬರುತ್ತಿಲ್ಲ. ಇದರಲ್ಲಿ ವಿಪರ್ಯಾಸ ಏನಂದರೆ ಜಾಗದ ಮಾಲೀಕತ್ವ ವಯಸ್ಸಾದ ಮಹಿಳೆಯದಾಗಿದ್ದು ಇಷ್ಟೆಲ್ಲ ಬೆಳವಣಿಗೆ ಆದರೂ ಸಹ ಈ ಮಣ್ಣು ಮಾಫಿಯವನ್ನು ತಡೆಯಲು ಅಧಿಕಾರಿಗಳು ಬಾರದೇ ಇರುವುದನ್ನು ನೋಡಿದರೆ ನಮ್ಮ ಕೊಡಗು ಜಿಲ್ಲೆಗೆ ಜಿಲ್ಲಾಧಿಕಾರಿ ಇದಾರೋ ಇಲ್ಲವೋ ಎಂಬ ಪ್ರಶ್ನೆ ಈ ಭಾಗದ ಜನರಲ್ಲಿ ಸಹಜವಾಗಿ ಮೂಡಿಬಂದಿದೆ. ಇದರಿಂದ ಮತ್ತೆ ಭೂಮಿ ತಾಯಿ ಸಿಟ್ಟಿನಿಂದ 2018 ಆದ ಭೂಕುಸಿತ ಮತ್ತೆ ಆದರೂ ಅಚ್ಚರಿ ಇಲ್ಲ ಎನ್ನಬಹುದು.
Back to top button
error: Content is protected !!