ಕುಶಾಲನಗರ,ಜೂ 03: ಕುಶಾಲನಗರ ಗ್ರಾಮಾಂತರ ಹಾಗೂ ನಗರ ಪೋಲಿಸ್ ಠಾಣೆ ವತಿಯಿಂದ ತಾಲ್ಲೂಕು ಮಟ್ಟದ ಹಿಂದೂ, ಮುಸ್ಲಿಂ ಸಮುದಾಯ ಮುಖಂಡರ ಶಾಂತಿ ಸಭೆ ಕುಶಾಲನಗರದ ಪೊಲೀಸ್ ವಿಶ್ರಾಂತಿ ಗೃಹದಲ್ಲಿ
ಡಿ. ವೈ.ಎಸ್ .ಪಿ. ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಬಕ್ರೀದ್ ಹಬ್ಬವನ್ನು ಶಾಂತಿಯುತವಾಗಿ ಪೋಲಿಸ್ ಇಲಾಖೆಯ ನಿಯಮಾನುಸಾರ, ಮತ್ತು ಕಾನೂನು ನಿಯಮವನ್ನು ಮೀರದಂತೆ ಸಂತೋಷದಿಂದ ಆಚರಣೆ ಮಾಡಿ ಎಂದು ಡಿ. ವೈ. ಎಸ್. ಪಿ. ಚಂದ್ರಶೇಖರ್ ತಿಳಿಸಿದರು.
ಶಾಂತಿ ಸಭೆಯಲ್ಲಿ ಹಿಂದೂ ಮತ್ತು ಮುಸ್ಲಿಂ ಸಮುದಾಯದ ಪ್ರಮುಖರು ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಸಭೆಯಲ್ಲಿ ಕುಶಾಲನಗರ ಪೋಲಿಸ್ ವೃತ್ತ ನಿರೀಕ್ಷ ದಿನೇಶ್, ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣಾಧಿಕಾರಿ ಮೋಹನ್ ರಾಜ್, ನಗರ ಠಾಣಾಧಿಕಾರಿ ಶ್ರೀನಿವಾಸ್, ಕೈಂ ವಿಭಾಗ ಠಾಣಾಧಿಕಾರಿ ಸ್ವಾಮಿ, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
Back to top button
error: Content is protected !!