ಆರೋಪ

ರಾಜ್ಯ ಕಂಡ ಅತ್ಯಂತ ಭ್ರಷ್ಟ ಕಾಂಗ್ರೆಸ್ ಸರಕಾರ: ಮಾಜಿ ಸಿಎಂ ಡಿವಿ ಸದಾನಂದಗೌಡ

ಕುಶಾಲನಗರ, ಮೇ 22: ರಾಜ್ಯದಲ್ಲಿ ಕಳೆದ 75 ವರ್ಷಗಳಿಂದ ಇಂಥ ಕೊಳ್ಳೆ ಹೊಡೆಯುವ ಸರ್ಕಾರ ಕಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಡಿ ವಿ ಸದಾನಂದ ಗೌಡ ಕಾಂಗ್ರೆಸ್ ಸರಕಾರದ ವಿರುದ್ದ ಆರೋಪ ವ್ಯಕ್ತಪಡಿಸಿದರು.
ಕುಶಾಲನಗರದ ಬಸವನಹಳ್ಳಿಗೆ ಆಗಮಿಸಿದ್ದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,
ಕಳೆದ ಎರಡು ವರ್ಷಗಳಿಂದ ನಾವು ಗಮನಿಸಿದ ಹಾಗೆ ಅತ್ಯಂತ ಭ್ರಷ್ಟ ಸರ್ಕಾರ ಇದಾಗಿದೆ. ಕೊಳ್ಳೆ ಹೊಡೆಯುವ ಲೂಟಿಕೋರರ ಕೂಟವಾಗಿದೆ. ತಾನು ಹತ್ತು ವರ್ಷ ಶಾಸಕನಾಗಿ 20 ವರ್ಷ ಲೋಕಸಭಾ ಸದಸ್ಯನಾಗಿ, ಸಚಿವನಾಗಿ, ಕೇಂದ್ರ ಮಂತ್ರಿಯಾಗಿ ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ನೋಡಿದ ಹಾಗೆ ಈ 75 ವರ್ಷಗಳಲ್ಲಿ ಇಂತಹ ಲೂಟಿಕೋರ ರಾಜ್ಯ ಸರ್ಕಾರ ನೋಡಿರಲಿಲ್ಲ.

ಮುಖ್ಯಮಂತ್ರಿ ಆಗಿ ಕೇಂದ್ರ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಅತ್ಯಂತ ಭ್ರಷ್ಟಾಚಾರ ನಡೆಸುತ್ತಿರುವ ಸರ್ಕಾರವಿದ್ದರೆ ಅದು ಕಾಂಗ್ರೆಸ್ ಸರ್ಕಾರ ಎಂದು ಟೀಕಿಸಿದರು.
ರಾಜ್ಯಕ್ಕೆ ಶೇಕಡ 68 ರಷ್ಟು ಆದಾಯ ನೀಡುವ ಬೆಂಗಳೂರಿನ ಜನತೆ ಇಂದು ಮಳೆಗೆ ಮೂಲಭೂತ ಸೌಕರ್ಯವಿಲ್ಲದ ಒದ್ದಾಡುವ ಪರಿಸ್ಥಿತಿ ನಿರ್ಮಾಣಗೊಂಡಿದೆ.
ನಮ್ಮ ಸರ್ಕಾರವಿದ್ದಾಗ ಒಳಚರಂಡಿ ನಿರ್ಮಾಣ ಕಾರ್ಯಕ್ಕೆ, ಚರಂಡಿ, ಕಾಲುವೆ ಸ್ವಚ್ಚತೆಗೆಂದು ವಿಶೇಷ ಅನುದಾನದಲ್ಲಿ 5000 ಕೋಟಿ ಹಣ ನೀಡಲಾಗಿತ್ತು, ಆದರೆ ಈ ಸರ್ಕಾರ ಆ ಹಣವನ್ನೆಲ್ಲ ಲೂಟಿ ಮಾಡಿದೆ. ಮೊನ್ನೆಯ ಮಳೆಗೆ ಒಂದೂವರೆ ಕೋಟಿ ಬೆಂಗಳೂರಿನ ಜನತೆ ತೇಲಾಡುತ್ತಿರುವಾಗ ಇವರು ಮಜಾ ಮಾಡಲಿಕ್ಕೆ ಗುಲ್ಬರ್ಗದಲ್ಲಿ ಎರಡನೇ ವರ್ಷದ ಸಂಭ್ರಮಾಚರಣೆಯನ್ನು ಮಾಡುವ ಮೂಲಕ ರಾಜ್ಯದ ಜನತೆಗೆ ಅಪಮಾನ ಮಾಡಿದ್ದಾರೆ ಎಂದರು.
ಗೃಹಮಂತ್ರಿ ಪರಮೇಶ್ವರ್ ಅವರ ಶಿಕ್ಷಣ ಸಂಸ್ಥೆ‌ ಮೇಲೆ ಇಡಿ ದಾಳಿ ಕುರಿತು ಪ್ರತಿಕ್ರಿಯಿಸಿದ ಅವರು, ಈ ಸರಕಾರದ ಅವಧಿಯಲ್ಲಿ ನಡೆದ ಹಲವು ಹಗರಣಗಳಲ್ಲಿ
ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಹೆಸರು ತಳುಕು ಹಾಕಿಕೊಂಡಿತ್ತು. ಇದೀಗ ಗೃಹ ಮಂತ್ರಿ ಪರಮೇಶ್ ಅವರ ಭ್ರಷ್ಟಾಚಾರ ಹೊರಗೆ ಬರುತ್ತಿದೆ. ಅವರೊಬ್ಬರು ಪ್ರಾಮಾಣಿಕರು ಎಂದು ನೆನೆಸಿದ್ದೆ ಆದರೆ ಸಹವಾಸ ದೋಷದಿಂದ ಅವರೂ ಕೂಡ ಕೆಟ್ಟಿದ್ದಾರೆ. ಇ.ಡಿ. ಈ ಬಗೆ ತನಿಖೆ ಕೈಗೊಂಡು ಎಲ್ಲವನ್ನು ಬಯಲು ಮಾಡಲಿದೆ ಎಂದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!