ಧಾರ್ಮಿಕ

ಕುಶಾಲನಗರ-ಕೂಡಿಗೆ ವ್ಯಾಪ್ತಿಯಲ್ಲಿ ಕುಂಡೆ ಹಬ್ಬ ಆಚರಣೆ

ಕುಶಾಲನಗರ, ಮೇ.21: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹುದುಗೂರು ಸಮೀಪದಲ್ಲಿರುವ ಗಂಧದ ಹಾಡಿಯ ನಿವಾಸಿಗಳಿಂದ ಬೈಗುಳ ಬೇಡು ಆಚರಣೆಯ ವಾರ್ಷಿಕ ಕುಂಡೆ ಹಬ್ಬದ ಅಂಗವಾಗಿ ವಿಶೇಷ ವೇಷಭೂಷಣ, ವೇಷದಾರಿಗಳಾಗಿ ವಿವಿಧ ಬಗೆಯ ವೇಷದ ಬಟ್ಟೆಗಳನ್ನು ಧರಿಸಿ ತಮ್ಮದೆ ಅದ ಹಳೆಯ ಪ್ಲಾಸ್ಟಿಕ್ ಡ್ರಂಗಳನ್ನು ಬಳಕೆ ಮಾಡಿಕೊಂಡು ವಾದ್ಯದ ಮಾದರಿಯಲ್ಲಿ ಬಡಿದುಕೊಂಡು ಕುಣಿತ ನೃತ್ಯ ಮಾಡುತ್ತಿರುವುದು ಕಂಡುಬರುತ್ತಿತು.
ವೇಷದಾರಿಗಳು ಕೂಡಿಗೆ, ಸರ್ಕಲ್, ಕೂಡುಮಂಗಳೂರು ಸರ್ಕಲ್ ವ್ಯಾಪ್ತಿಯಲ್ಲಿ ಕುಣಿದು ಹಬ್ಬ ಆಚರಣೆ ಮಾಡಿದರು. ಇದರಲ್ಲಿ ಹಾಡಿ ಪ್ರಮುಖರಾದ ಮಹೇಶ್, ಪುನೀತ್, ಬಸಪ್ಪ,ದರ್ಶನ್ ಸೇರಿದಂತೆ ಹಲವಾರು ಮಂದಿ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!