ಕುಶಾಲನಗರ ಅ 27:: ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ಹುಣ್ಣಿಮೆ ಅಂಗವಾಗಿ ಕೊಡಗು-ಮೈಸೂರು ಗಡಿ ಸೇತುವೆ ಬಳಿಯ ಕಾವೇರಿ ಪ್ರತಿಮೆ ಕ್ಷೇತ್ರದಲ್ಲಿ 164ನೇ ಹುಣ್ಣಿಮೆ ಪೂಜಾ ಕೈಂಕರ್ಯ ಜರುಗಿತು.
ಅರ್ಚಕ ಪುರುಷೋತ್ತಮ ಭಟ್ ನೇತೃತ್ವದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಲಾಯಿತು.
ಕಾವೇರಿ ಮಾತೆಗೆ ಅಲಂಕಾರ ಮಾಡಿ ವಿಶೇಷ ಪೂಜೆ ನೆರವೇರಿಸಿ
ಮಹಾಮಂಗಳಾರತಿ ಬಳಿಕ ನೆರೆದಿದ್ದ ಭಕ್ತರಿಗೆ ಪ್ರಸಾದ, ಅನ್ನಸಂತರ್ಪಣೆ ನೆರವೇರಿಸಲಾಯಿತು.
ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ್ ಶೆಟ್ಟಿ ಬಣದ ತಾಲೂಕು ಯುವ ಘಟಕದ ಅಧ್ಯಕ್ಷ ಪುನೀತ್ ಹಾಗೂ ಉಪಾಧ್ಯಕ್ಷ ಪಾಪಣ್ಣ ಅವರ ನೇತೃತ್ವದಲ್ಲಿ ಹುಣ್ಣಿಮೆ ಪೂಜಾ ಸೇವಾರ್ಥ ನೆರವೇರಿಸಲಾಯಿತು.
ಬೆಂಗಳೂರಿನ ಸುನಂದಾ ಕೌಶಿಕ್ ಪೂಜೆಗೆ ವಸ್ತ್ರದಾನ ನೀಡಿದರು.
ಈ ಸಂದರ್ಭ ಪೂಜೋತ್ಸವದಲ್ಲಿ ಪಾಲ್ಗೊಂಡಿದ್ದ ಕರವೇ ಜಿಲ್ಲಾಧ್ಯಕ್ಷ ದೀಪಕ್ ಕನ್ನಡಿಗ ಮಾತನಾಡಿ, ಎರಡು ರಾಜ್ಯಗಳ ಜೀವನಾಡಿಯಾದ ಕಾವೇರಿ ಸ್ವಚ್ಚತೆ ಸಂರಕ್ಷಣೆ ಎಲ್ಲರ ಕರ್ತವ್ಯ. ಕಾವೇರಿ ಕ್ಷೇತ್ರದಲ್ಲಿ ಪ್ರತಿ ಹುಣ್ಣಿಮೆಗೆ ಪೂಜೆ ನೆರವೇರಿಸಿ ಭಕ್ತರಿಗೆ ಅನ್ನದಾನ ಸೇರಿದಂತೆ ಪ್ರತಿ ವರ್ಷ ಕಾವೇರಿ ತೀರ್ಥ ವಿತರಣೆ ಕಾರ್ಯ ನಡೆಸುತ್ತಿರುವುದು ಮಹತ್ಕಾರ್ಯ. ನಾವೂ ಕೂಡ ಕಾವೇರಿ ಸಂರಕ್ಷಣೆಗೆ ನಮ್ಮ ಸಹಕಾರ ನೀಡಲಿದ್ದೇವೆ ಎಂದು ತಿಳಿಸಿದರು.
ಪೂಜಾ ಕಾರ್ಯಕ್ರಮದಲ್ಲಿ
ಕರವೇ ಜಿಲ್ಲಾ ಮಹಿಳಾ ಅಧ್ಯಕ್ಷೆ ಸಂಧ್ಯಾ ಗಣೇಶ್, ಉಪಾಧ್ಯಕ್ಷೆ ಇಂಚರ ಗೌಡ, ಪ್ರಧಾನ ಕಾರ್ಯದರ್ಶಿ ಶೃತಿ ಗಿರೀಶ್, ಜಿಲ್ಲಾ ಯುವ ಘಟಕದ ಅಧ್ಯಕ್ಷ ವಸಂತ ಆಚಾರ್ಯ, ಮಡಿಕೇರಿ ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಕನ್ನಡಿಗ ಆನಂದ್ ಗೌಡ, ಉಪಾಧ್ಯಕ್ಷ ಜೈ ಸ್ವಾಮಿ, ನಗರಾಧ್ಯಕ್ಷ ಡಿ.ಆರ್. ಯೋಗೇಶ್, ಉಪಾಧ್ಯಕ್ಷ ರವಿ ಡಿ.ಎನ್, ನಗರ ಮಹಿಳಾಧ್ಯಕ್ಷೆ ರೇಣುಕಾ, ಸುಂಟಿಕೊಪ್ಪ ಹೋಬಳಿ ಅಧ್ಯಕ್ಷ ಪುನೀತ್, ಬಾರವಿ ಕಾವೇರಿ ಕನ್ನಡ ಸಂಘದ ಪ್ರಮುಖರಾದ ರವೀಂದ್ರ ಪ್ರಸಾದ್, ಬಬೀಂದ್ರ ಪ್ರಸಾದ್, ವಿಜಯೇಂದ್ರ ಪ್ರಸಾದ್, ಇ.ಟಿ.ಚಂದ್ರು, ರಾಜರಾಜೇಶ್ವರಿ ಚಂದ್ರು, ತಿಲಕ್ ಪೂಜಾರಿ, ಕಾವೇರಿಮಣಿ, ರುದ್ರೇಶ್, ವೆಂಕಪ್ಪ, ದೇವರಾಜು, ರವಿ, ಮಹಾತ್ಮಾ, ಶಂಕರ್ ಕೊಪ್ಪ, ಜಬಿವುಲ್ಲಾ, ಅಬ್ದುಲ್ ಅಜೀಜ್, ಅಬೀಬ್ ರೆಹಮಾನ್,
ಮತ್ತಿತರರು ಇದ್ದರು.
Back to top button
error: Content is protected !!