ಪ್ರತಿಭಟನೆ

ಬಗೆಹರಿಯದ ಬೈಚನಹಳ್ಳಿ ಸ್ಮಶಾನ ವಿವಾದ: ಅನಿರ್ದಿಷ್ಟಾವಧಿ ಹೋರಾಟಕ್ಕೆ ಸಿದ್ದತೆ

ಕುಶಾಲನಗರ, ಮೇ 21: ಬೈಚನಹಳ್ಳಿ ಗ್ರಾಮದ ಸ್ಮಶಾನ‌ ವಿವಾದ ಸಮರ್ಪಕವಾಗಿ ಬಗೆಹರಿಯದ ಕಾರಣ ಗೆಳೆಯರ ಬಳಗದ ನೇತೃತ್ವದಲ್ಲಿ ಗುರುವಾರದಿಂದ (ನಾಳೆಯಿಂದ) ಅನಿರ್ದಿಷ್ಟಾವಧಿ ಹೋರಾಟ ಹಮ್ಮಿಕೊಳ್ಳಲು ಸಿದ್ದತೆ ನಡೆದಿದೆ.

ಗ್ರಾಮದ ಸರ್ವೆ ನಂ 2/1 ರಲ್ಲಿ ಕಳೆದ‌ 4 ದಶಕಗಳಿಂದ ಈ‌ ಭಾಗದ ಗ್ರಾಮಸ್ಥರು ಶವಸಂಸ್ಕಾರ ನೆರವೇರಿಸಿಕೊಂಡು ಬರುತ್ತಿದ್ದರು. ಆದರೆ ಮತ್ತೊಂದು ಧರ್ಮದವರ ಪರವಾಗಿ ಆರ್‌ಟಿಸಿ ರಚಿಸಿರುವ ವಿರುದ್ದ ಈ ಹಿಂದೆ ಪ್ರತಿಭಟನೆ ನಡೆಸಲಾಗಿತ್ತು.
ಹಿಂದೂ ರುದ್ರಭೂಮಿಗಾಗಿ ಗ್ರಾಮದ ಹೆಸರಿಗೆ ಖಾತೆ ಮಾಡಿಕೊಡುವ ಅಧಿಕಾರಿಗಳ ಭರವಸೆ ಇದುವರೆಗೆ ಈಡೇರದ ಕಾರಣದಿಂದ ನ್ಯಾಯ ದೊರಕುವವರೆಗೆ ಹೋರಾಟ ಮುಂದುವರೆಸುವುದಾಗಿ ಗೆಳೆಯರ ಬಳಗದ ಅಧ್ಯಕ್ಷ ಶ್ರೀಕಾಂತ್ ಹಾಗೂ ಪುರಸಭೆ ಸದಸ್ಯ ಬಿ.ಎಲ್.ಜಗದೀಶ್ ತಿಳಿಸಿದ್ದಾರೆ. 52 ಸೆಂಟ್ ಜಾಗ ಸ್ಮಶಾನಕ್ಕೆ ಒದಗಿಸಬೇಕಿದೆ ಹಾಗೂ ಸ್ಮಶಾನ ಪಕ್ಕದಲ್ಲಿಯೇ ಗೋಮಾಳ ಜಾಗವನ್ನು 9.38 ಎಕರೆ ಲೇಔಟ್ ಗೆ ದಾಖಲೆ ಮಾಡಿಕೊಟ್ಟ ಖಾತೆಗಳನ್ನು ಹಾಗೂ ನಿವೇಶನಗಳನ್ನು ಕೂಡಲೆ ರದ್ದತಿ ಮಾಡಿ ತೆರವುಗೊಳಿಸಲು ಆಗ್ರಹಿಸಿ ಹೋರಾಟ ಹಮ್ಮಿಕೊಂಡಿರುವುದಾಗಿ ಬಳಗದ ಸದಸ್ಯರು ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!