ಕುಶಾಲನಗರ ಮೇ.17:ಶಿರಂಗಾಲ ಸರ್ಕಾರಿ ಪಿಯೂ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದು, ಪ್ರಾಂಶುಪಾಲರ ಹುದ್ದೆಗೆ ಮುಂಬಡ್ತಿ ಪಡೆದು
ಕೂಡಿಗೆ ಸರ್ಕಾರಿ ಪಿಯೂ ಕಾಲೇಜಿನ ಪ್ರಾಂಶುಪಾಲರಾಗಿ . ಎಚ್.ಜೆ.ನಾಗರಾಜ್
ನೇಮಕಗೊಂಡಿದ್ದಾರೆ.
ಪ್ರಾಂಶುಪಾಲರ ಹುದ್ದೆಗೆ ಶುಕ್ರವಾರ ನಡೆದ ಕೌನ್ಸಿಲಿಂಗ್ ನಲ್ಲಿ ನಾಗರಾಜ್, ಕೂಡಿಗೆ ಕಾಲೇಜನ್ನು ಆಯ್ಕೆ ಮಾಡಿಕೊಂಡಿದ್ದರು.
ಕೂಡಿಗೆ ಕಾಲೇಜಿಗೆ ಆಗಮಿಸಿದ ನೂತನ ಪ್ರಾಂಶುಪಾಲ ನಾಗರಾಜ್, ನೂತನ
ಪ್ರಾಂಶುಪಾಲರ ಹುದ್ದೆಯ ಕಾರ್ಯಾಭಾರವನ್ನು
ಪ್ರಭಾರ ಪ್ರಾಂಶುಪಾಲರಾದ ನಾಗಪ್ಪ ಯಾಲಕ್ಕಿಕಟ್ಟೆ ಅವರಿಂದ
ಅಧಿಕಾರ ವಹಿಸಿಕೊಂಡರು.
ಈ ಸಂದರ್ಭದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಸೋಮಶೇಖರ್, ಮಾಜಿ ಉಪಾಧ್ಯಕ್ಷ ಕೆ.ಕೆ.ನಾಗರಾಜಶೆಟ್ಟಿ,
ಶಿರಂಗಾಲ ಕಾಲೇಜಿನ ಪ್ರಾಂಶುಪಾಲ
ಸೋಮಚಂದ್ರ, ಕೂಡಿಗೆ ಗ್ರಾಮ.ಪಂಚಾಯತಿ.ಮಾಜಿ ಅಧ್ಯಕ್ಷ ಟಿ.ಕೆ.ವಿಶ್ವನಾಥ್,
,ಶಿಕ್ಷಕರ ಸಂಘಟನೆಯ ಪ್ರಮುಖರಾದ
ಸಿ.ಟಿ.ಸೋಮಶೇಖರ್, ಎಂ.ರಂಗಸ್ವಾಮಿ, ಎಸ್.ಎ.ಯೋಗೇಶ್ , ಕಾಲೇಜು ಹಿರಿಯ ಉಪನ್ಯಾಸಕರಾದ ಕಾವೇರಮ್ಮ, ರಮೇಶ್,
ಸಿ ಆರ್‌ಪಿ ಕೆ.ಶಾಂತಕುಮಾರ್, ಶಿಕ್ಷಕ ನಾಗರಾಜ್ ಇತರರು ಇದ್ದರು.
Back to top button
error: Content is protected !!