ಕುಶಾಲನಗರ ,ಮೇ. 16: ಕುಶಾಲನಗರ ವಲಯ ಅರಣ್ಯ ಇಲಾಖೆಯ ವ್ಯಾಪ್ತಿಯ ಅಂದಗೋವೆ, ನಾಕೂರು ಶಿರಂಗಾಲ, ಕಾನ್ ಬೈಲ್-ಬೈಚನಹಳ್ಳಿ, ಹೆರೂರು ಕಲ್ಲೂರು ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು ಗ್ರಾಮಸ್ಥರ ಕೋರಿಕೆ ಮೇರೆಗೆ ಈ ವ್ಯಾಪ್ತಿಯ ಗ್ರಾಮದ ತೋಟಗಳಲ್ಲಿ ಬಿಡುಬಿಟ್ಟಿರುವ ಕಾಡಾನೆಗಳನ್ನು ದಿನಾಂಕ 19 ರ ಸೋಮವಾರದದ್ದು ಕಾಡಿಗೆ ಅಟ್ಟುವ ಕಾರ್ಯಚರಣೆ ನಡೆಯಲಿದೆ ಎಂದು ಕುಶಾಲನಗರ ವಲಯ ಅರಣ್ಯಾಧಿಕಾರಿ ರತನ್ ಕುಮಾರ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಾರ್ಯಚರಣೆ ಸಂದರ್ಭದಲ್ಲಿ ಆಯಾ ಗ್ರಾಮದ ತೋಟದ ಮಾಲೀಕರು ತೋಟದ ಕಾರ್ಮಿಕರಿಗೆ ಸೂಚನೆ ನೀಡುವಂತೆ ಮನವಿ ಮಾಡಿದ್ದಾರೆ. ಕಾಡಾನೆಗಳನ್ನು ಕಾಡಿಗೆ ಓಡಿಸುವ ಕಾರ್ಯಕ್ಕೆ ಸಹಕಾರ ನೀಡುವಂತೆ ಅರಣ್ಯಾಧಿಕಾರಿ ರತನ್ ಕುಮಾರ್ ಕೋರಿದ್ದಾರೆ.
Back to top button
error: Content is protected !!