ಕುಶಾಲನಗರ,ಏ೩: ಹರದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹರದೂರು – ಕಾಜೂರು ಉರೂಸ್ ಗೆ ಮಸ್ಜಿದುನ್ನೂರ್ ಮಸೀದಿಯ ಧರ್ಮಗುರುಗಳಾದ ಅಬ್ದುಲ್ ಹಕೀಂ ಅನ್ವಾರಿಯವರು ಶುಕ್ರವಾರದಂದು ಚಾಲನೆ ನೀಡಲಾಯಿತು.
ಕಾಜೂರು ಉರೂಸ್ ಮಕಾಂ ನಲ್ಲಿ ಧ್ವಜಾರೋಹಣ ನೆರವೇರಿಸಿದ ಅವರು, ಉರೂಂ ಯಶಸ್ವಿಯಾಗಿ ನಡೆಯಲು ಪ್ರಾರ್ಥಿಸಿದರು.
ಸ್ವಲಾತ್ ಕಮಿಟಿ ಅಧ್ಯಕ್ಷರಾದ ಸುಲೈಮಾನ್ ಸಖಾಫಿ ಮಾತನಾಡಿ, ಉರೂಸ್ ಗೆ ಶುಕ್ರವಾರ ಚಾಲನೆ ನೀಡಲಾಗಿದ್ದು, ಸೋಮವಾರದಂದು ಸಮಾರೋಪ ಸಮಾರಂಭ ನಡೆಯಲಿದೆ. ಎಲ್ಲರೂ ಉರೂಸ್ ನಲ್ಲಿ ಭಾಗವಹಿಸುವ ಮೂಲಕ ಉರೂಸನ್ನು ಯಶಸ್ವಿಗೊಳಿಸಬೇಕು ಎಂದರು.
ಹರದೂರು ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಂ.ಎ.ಮುಸ್ತಫಾ ಮಾತನಾಡಿ, ವರ್ಷಂಪ್ರತಿ ನಡೆಸಿಕೊಂಡು ಬರುತ್ತಿರುವ ಕಾಜೂರು ಮಕಾಂ ಉರೂಸ್ ಗೆ ಇಂದು ಚಾಲನೆ ನೀಡಲಾಗಿದೆ. ಉರೂಸ್ ಕೊಡಗಿನ ಎಲ್ಲಾ ಕಡೆಗಳಿಂದಲೂ ಜನರು ಪಾಲ್ಗೊಳ್ಳುತ್ತಾರೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಆಗಮಿಸಿ ಉರೂಸ್ ನ ಯಶಸ್ವಿಗೆ ಸಾರ್ವಜನಿಕರು ಸಹಕರಿಸಬೇಕು ಎಂದರು.
ಈ ಸಂದರ್ಭ ಮಸ್ಜಿದುನ್ನೂರು ಮುಸ್ಲಿಂ ಜಮಾಅತ್ ಕಮಿಟಿ ಅಧ್ಯಕ್ಷರಾದ ಅಬ್ದುಲ್ಲಾ, ಕಾರ್ಯದರ್ಶಿ ಅಜ಼ೀಜ಼್, ಖಜಾಂಜಿ ಜ಼ಕ್ರಿಯಾ, ಪ್ರಮುಖರಾದ ಯಾಕೂಬ್, ಉಮರ್ ಹಾಜಿ, ಸೈದು, ರಜ಼ಾಕ್, ಕಾದರ್, ಸಿದ್ದೀಕ್, ಕೆ.ಬಿ.ಶಂಶುದ್ಧೀನ್ ಹಾಗೂ ಇನ್ನಿತರರು ಇದ್ದರು.
Back to top button
error: Content is protected !!