ಧಾರ್ಮಿಕ

ಗಂಗಾ ತೀರ್ಥವನ್ನು ಮೆರವಣಿಗೆಯಲ್ಲಿ ಕೊಂಡೊಯ್ದ ಹೆಬ್ಬಾಲೆ ಗ್ರಾಮಸ್ಥರು

ಕುಶಾಲನಗರ, ಮಾ 25 : ಕಣಿವೆಯಲ್ಲಿ ಇರುವ ಐತಿಹಾಸಿಕ ಶ್ರೀ ರಾಮಲಿಂಗೇಶ್ವರ ಬ್ರಹ್ಮರಥೋತ್ಸವವ ಹಿನ್ನೆಲೆಯಲ್ಲಿ ಕಾಶಿಯಿಂದ ಅಂಚೆಯ ಮೂಲಕ ತರುವ ಗಂಗಾಜಲವನ್ನು ಹೆಬ್ಬಾಲೆ ಗ್ರಾಮದೇವತಾ ಸಮಿತಿ ಪದಾಧಿಕಾರಿಗಳು ಅಲಂಕೃತ ಮಂಟಪದಲ್ಲಿ ವಾಹನದಲ್ಲಿ ಇರಿಸಿ ಮಂಗಳ ವಾದ್ಯಗಳೊಂದಿಗೆ ಮೆರವಣಿಗೆಯಲ್ಲಿ ಹೆಬ್ಬಾಲೆಯ ಬಸವೇಶ್ವರ ದೇವಾಲಯಕ್ಕೆ ಕೊಂಡೊಯ್ದರು.
ಗ್ರಾಮದಲ್ಲಿ ಗಂಗಾ ತೀರ್ಥವನ್ನು ಪೂಜೆ ಮಾಡಿಸಿದ ನಂತರ
ರಥೋತ್ಸವದ ದಿನ ಮಧ್ಯಾಹ್ನ ಮೆರವಣಿಯಲ್ಲಿ ತಂದು ಶ್ರೀರಾಮಲಿಂಗೇಶ್ವರ ಉತ್ಸವ ಮೂರ್ತಿಯ ಮೇಲೆ ಪ್ರೋಕ್ಷಣೆಗೈದ ಬಳಿಕವಷ್ಟೇ ರಥೋತ್ಸವಕ್ಕೆ ಚಾಲನೆ ನೀಡಲಾಗುತ್ತದೆ ಎಂದು ದೇವಾಲಯ ಸಮಿತಿ ಅಧ್ಯಕ್ಷ ಕೆ.ಎನ್.ಸುರೇಶ್ ತಿಳಿಸಿದರು.
ಈ ಸಂದರ್ಭ ಕಣಿವೆ ದೇವಾಲಯ ಸಮಿತಿ ಉಪಾಧ್ಯಕ್ಷ ಮಂಜುನಾಥ ಸ್ವಾಮಿ, ಹೆಬ್ಬಾಲೆ ಗ್ರಾಮ ದೇವತಾ ಸಮಿತಿ ಅಧ್ಯಕ್ಷ ಹೆಚ್.ಟಿ.ರಮೇಶ್, ಉಪಾಧ್ಯಕ್ಷ ನಾರಾಯಣ, ಕಾರ್ಯದರ್ಶಿ ಹೆಚ್.ಟಿ.ಸೋಮಣ್ಣ, ಪುಟ್ಟರಾಜು, ರಮೇಶ್, ಶಿವಪ್ಪ, ದಿನೇಶ, ನವೀನ್ ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!