ಕುಶಾಲನಗರ, ಮಾ 07:: ಕರ್ನಾಟಕ ವಿದ್ಯುತ್ ಪ್ರಸರಣಾ ನಿಗಮ ನಿಯಮಿತ ಸಂಘದ ಕುಶಾಲನಗರ ಪ್ರಾಥಮಿಕ ಸಮಿತಿಯ ಸಂಘದ ನೂತನ ಕಚೇರಿ ಉದ್ಘಾಟನೆ ಹಾಗೂ ಸುರಕ್ಷತಾ ಸಭೆ ಶುಕ್ರವಾರ ಕುಶಾಲನಗರದ ಚೆಸ್ಕಾಂ ವಿಭಾಗೀಯ ಕಚೇರಿ ಆವರಣದಲ್ಲಿ ನಡೆಯಿತು.
ನೂತನ ನೌಕರರ ಸಂಘದ ಕಚೇರಿ ಉದ್ಘಾಟಿಸಿ ಮಡಿಕೇರಿ ವಿಭಾಗದ ಚೆಸ್ಕಾಂ ಕಾರ್ಯಪಾಲಕ ಎಂಜಿನಿಯರ್ ರಾಮಚಂದ್ರ ಮಾತನಾಡಿ, ನೌಕರರು ಪ್ರಾಮಾಣಿಕ ಕರ್ತವ್ಯ ನಿರ್ವಹಿಸುವ ಮೂಲಕ ಸಂಸ್ಥೆಯ ಏಳಿಗೆಗೆ ಶ್ರಮಿಸಬೇಕು ಎಂದರು.
ಗೋಣಿಕೊಪ್ಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಸತೀಶ್, ಸೋಮವಾರಪೇಟೆ ವಿಭಾಗದ ವಿನಯ್ ಕುಮಾರ್,ಕುಶಾಲನಗರ ವಿಭಾಗದ ಮಂಜುನಾಥ್ ಹಾಗೂ ಸುರೇಶ್ ಮಾತನಾಡಿ, ನೌಕರರು ಸುರಕ್ಷತಾ ಸಾಧನಗಳನ್ನು ಬಳಸುವ ಮೂಲಕ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡಿದರು.
ರಾಜ್ಯ ಸಂಘದ ಮುಖಂರಾದ ಸಂದೀಪ್, ಸತ್ಯನಾರಾಯಣ, ಶರಣಬಸಪ್ಪ,ಮಹೇಶ್ ,ಕೃಷ್ಣರಾಜು ಮಾತನಾಡಿದರು.
ಕುಶಾಲನಗರ ಸಮಿತಿ ಅಧ್ಯಕ್ಷ ಲವಕುಮಾರ್ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭ ಮೈಸೂರು ಮುರಳಿಕೃಷ್ಣ,ಹಾಸನ ಸಂಘಟನಾ ಕಾರ್ಯದರ್ಶಿ ಪ್ರವೀಣ್ ,ಮೈಸೂರು ವೆಂಕಟೇಶ,
ಮಡಿಕೇರಿ ಸಮಿತಿ ಅಧ್ಯಕ್ಷ ಶಿವಾನಂದ,
ಮಹಾದೇವಯ್ಯ ಕೊಳ್ಳೇಗಾಲ,
ರತ್ನಯ್ಯ ಮಡಿಕೇರಿ,ಗಣೇಶ್,ಪ್ರಕಾಶ್, ಸಹಾಯಕ ಲೆಕ್ಕಾಧಿಕಾರಿ ಪ್ರದೀಪ್ ಮುಖಂಡರಾದ ಸೋಮೇಶ್,ರಾಣಿ,ಹೇಮಂತ್,ತೀರ್ಥಕುಮಾರ್,ಗೌರಿ ಶಂಕರ್, ರಮೇಶ್ ಸುಂಟಿಕೊಪ್ಪ. ಸಂಘಟನಾ ಕಾರ್ಯದರ್ಶಿ ಕೆ.ಬಿ.ಕೃಷ್ಷರಾಜು,ಗುತ್ತಿಗೆದಾರರ ಸಂಘದ ಜಿಲ್ಲಾಧ್ಯಕ್ಷ ವಸಂತ ರೈ ಮತ್ತಿತರರು ಪಾಲ್ಗೊಂಡಿದ್ದರು.
ಇದೇ ಸಂದರ್ಭ ಅಧಿಕಾರಿಗಳು, ಸಮಿತಿ ಪ್ರಮುಖರು, ನಿವೃತ್ತ ನೌಕರರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
Back to top button
error: Content is protected !!