ಕ್ರೈಂ

10 ಕೋಟಿ ಮೌಲ್ಯದ ಅಂಬರ್ ಗ್ರೀಸ್ ವಶ

ಕುಶಾಲನಗರ, ಏ 10: ಕೇರಳ ರಾಜ್ಯದಿಂದ ಅಕ್ರಮವಾಗಿ ಅಂದಾಜು ರೂ.10 ಕೋಟಿ ಮೌಲ್ಯದ 10 ಕೆ.ಜಿ 390 ಗ್ರಾಂ ಅಂಬರ್ಗ್ರೀಸ್ (ತಿಮಿಂಗಲದ ವಾಂತಿ) ಅನ್ನು ಮಾರಾಟ ಮಾಡಲು ಸಾಗಿಸುತ್ತಿದ್ದ ವ್ಯಕ್ತಿಗಳನ್ನು ಬಂಧಿಸುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.

ವಿರಾಜಪೇಟೆ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೇರಳ ರಾಜ್ಯದ ತಿರುವನಂತಪುರಂನಿಂದ ಅಕ್ರಮವಾಗಿ ಅಂಬರ್ ಗ್ರೀಸ್ (ತಿಮಿಂಗಲದ ವಾಂತಿ) ಅನ್ನು ಮಾರಾಟ ಮಾಡುವ ಸಲುವಾಗಿ ವಾಹನದಲ್ಲಿ ಸಾಗಿಸುತ್ತಿರುವ ಕುರಿತು ಮಾಹಿತಿ ಹಿನ್ನೆಲೆಯಲ್ಲಿ ಆರೋಪಿಗಳ ಪತ್ತೆಗಾಗಿ ಶ್ರೀ ಮಹೇಶ್ ಕುಮಾರ್.ಎಸ್. ಡಿಎಸ್‌ಪಿ ವಿರಾಜಪೇಟೆ ಉಪವಿಭಾಗ, ಶ್ರೀ ಅನೂಪ್ ಮಾದಪ್ರ.ಪಿ, ಸಿಪಿಐ, ವಿರಾಜಪೇಟೆ ವೃತ್ತ, ಶ್ರೀ ಪ್ರಮೋದ್.ಹೆಚ್.ಎಸ್. ಪಿಎಸ್‌ಐ, ವಿರಾಜಪೇಟೆ ನಗರ ಪೊಲೀಸ್ ಠಾಣೆ ಹಾಗೂ ಠಾಣಾ ಸಿಬ್ಬಂದಿಗಳು ಮತ್ತು ವೃತ್ತ ಮಟ್ಟದ ಅಪರಾಧ ಪತ್ತೆ ಸಿಬ್ಬಂದಿಗಳ ತಂಡ ರಚಿಸಿ ದಿನಾಂಕ: 10-04-2025 ರಂದು ಬೆಟೋಳಿ ಗ್ರಾಮದ ಹೆಗ್ಗಳ ಜಂಕ್ಷನ್ ಬಳಿ ದಾಳಿ ನಡೆಸಿ ಕಾರಿನಲ್ಲಿ ಅಕ್ರಮವಾಗಿ 10 ಕೆ.ಜಿ 390 ಅಂಬರ್‌ಗ್ರೀಸ್ (ತಿಮಿಂಗಲದ ವಾಂತಿ) ಅನ್ನು ಸಾಗಿಸುತ್ತಿದ್ದ ಕೇರಳ ರಾಜ್ಯ ಮೂಲದ 10 ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ವಿರಾಜಪೇಟೆ ನಗರ ಪೊಲೀಸ್ ಠಾಣೆಯಲ್ಲಿ ಕಲಂ: 2(32), 2(36), 39(2)(3), 44, 48(2), 49(2), 49(2), 50, 51 ដ ಅಡಿಯಲ್ಲಿ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗಿರುತ್ತದೆ. 5-1972 5

ಆರೋಪಿಗಳ ವಿವರ:

1. ಶಂಶುದ್ದೀನ್.ಎಸ್. 45 ವರ್ಷ, ತಿರುವನಂತಪುರಂ, ಕೇರಳ ರಾಜ್ಯ

2. ಎಂ.ನವಾಜ್, 54 ವರ್ಷ, ತಿರುವನಂತಪುರಂ, ಕೇರಳ ರಾಜ್ಯ,

3. ವಿ.ಕೆ.ಲತೀಶ್, 53 ವರ್ಷ, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ,

4. ರಿಜೇಶ್.ವಿ, 40 ವರ್ಷ, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ,

5. ಪ್ರಶಾಂತ್.ಟಿ, 52 ವರ್ಷ, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ,

6. ರಾಘವೇಂದ್ರ,ಎ.ವಿ, 48 ವರ್ಷ, ಭದ್ರವಾತಿ, ಶಿವಮೊಗ್ಗ ಜಿಲ್ಲೆ,

7. ಬಾಲಚಂದ್ರನಾಯಕ್. 55 ವರ್ಷ, ಕಾಸರಗೋಡು, ಕೇರಳ ರಾಜ್ಯ,

8. ಸಾಜುಥಾಮೋಸ್, 58 ವರ್ಷ, ಕ್ಯಾಲಿಕಟ್, ಕೇರಳ ರಾಜ್ಯ

9. ಜೋಬಿಸ್.ಕೆ.ಕೆ. 33 ವರ್ಷ, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ,

10. ಜಿಜೇಸ್.ಎಂ. 40 ವರ್ಷ, ಕಣ್ಣೂರು ಜಿಲ್ಲೆ, ಕೇರಳ ರಾಜ್ಯ.

ವಶಪಡಿಸಿಕೊಂಡ ಸ್ವತ್ತುಗಳ ವಿವರ:

1. 10 ಕೆ.ಜಿ 390 ಗ್ರಾಂ ಅಂಬರ್‌ಗ್ರೀಸ್ (ತಿಮಿಂಗಲದ ವಾಂತಿ) ಅಂದಾಜು ಮೌಲ್ಯ ರೂ. 10 ಕೋಟಿ.

2. 8.25-792-0011 2

3. ಕೆ.ಎಲ್-13 ಎಎಕ್ಸ್-5197 ಮಾರುತಿ ಸ್ವೀಫ್ಟ್

4. 02 ನೋಟು ಎಣಿಸುವ ಯಂತ್ರಗಳು.

ಸದರಿ ಪ್ರಕರಣದ ಆರೋಪಿಗಳನ್ನು ಬಂಧಿಸುವಲ್ಲಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಅಧಿಕಾರಿ ಹಾಗೂ ಸಿಬ್ಬಂದಿರವರುಗಳನ್ನು ಶ್ರೀ ಕೆ. ರಾಮರಾಜನ್, ಐಪಿಎಸ್, ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ ರವರು ಶ್ಲಾಘಿಸಿರುತ್ತಾರೆ.

20/-ಪೊಲೀಸ್ ಅಧೀಕ್ಷಕರು, ಕೊಡಗು ಜಿಲ್ಲೆ, ಮಡಿಕೇರಿ

A

X

Edit

Annotate

Fill & Sign

Convert

All

Related Articles

Leave a Reply

Your email address will not be published. Required fields are marked *

Back to top button
error: Content is protected !!