ಕುಶಾಲನಗರ, ಮಾ. 1: ರಾಮೇಶ್ವರ ಕೂಡುಮಂಗಳೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿ ಸೇವೆ ನಿರ್ವಹಿಸುತ್ತಿದ್ದ ಎಂ. ಪಿ. ಮೀನಾ ಅವರು ವಯೋ ನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಅವರಿಗೆ ಸಂಘದ ವತಿಯಿಂದ ಬೀಳ್ಕೊಡಲಾಯಿತು.
ಸಂಘದ ಆಡಳಿತ ಮಂಡಳಿಯ ಅಧ್ಯಕ್ಷ ಕೆ ಕೆ. ಹೇಮಂತ್ ಕುಮಾರ್ ಅವರು ಮೀನಾ ಅವರಿಗೆ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷ ವಿ. ಬಸಪ್ಪ, ಸಂಘದ ನಿರ್ದೇಶಕರಾದ ಕೃಷ್ಣೇಗೌಡ, ಕೆ.ಟಿ. ಅರುಣ್ ಕುಮಾರ್, ಕೆ.ಪಿ.ರಾಜು ,ಅರುಣ್ ರಾವ್, ನಾಗರಾಜು, ಎಸ್. ಎಸ್ ಕೃಷ್ಣ, ರಾಮಚಂದ್ರ, ಕುಮಾರ್, ಜಯಶ್ರೀ, ರಮೇಶ್, ಕೆ.ಕೆ.ಪ್ರವಿತ್ರ, ವೃತ್ತಿ ಪರ ನಿರ್ದೇಶಕರಾದ ಆರ್.ಕೆ.ನಾಗೇಂದ್ರ ಬಾಬು, ಡಿ.ಎನ್. ಚಂದ್ರಶೇಖರ್, ಲೆಕ್ಕಿಗ ಕೆ.ಎಂ ನಾಗರಾಜು, ಸೇರಿದಂತೆ ಸಿಬ್ಬಂದಿ ವರ್ಗದವರು ಹಾಜರಿದ್ದರು.
Back to top button
error: Content is protected !!