ಕುಶಾಲನಗರ, ಮಾ 01:ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಕ್ರಮವಾಗಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ/ಸರಬರಾಜು ಮಾಡುತ್ತಿದ್ದ ವ್ಯಕ್ತಿಗಳನ್ನು ಪತ್ತೆ ಹಚ್ಚುವಲ್ಲಿ ಕೊಡಗು ಜಿಲ್ಲಾ ಪೊಲೀಸ್ ಯಶಸ್ವಿಯಾಗಿದೆ.
ಕೊಡಗು ಜಿಲ್ಲಾ ವ್ಯಾಪ್ತಿಯಲ್ಲಿ ಮಾದಕ ವಸ್ತುಗಳ ಮಾರಾಟದ ಬಗ್ಗೆ ನಮ್ಮ ಕಛೇರಿ /ಠಾಣೆಗಳಿಗೆ ಸಾರ್ವಜನಿಕರಿಂದ ದೂರು ಬರುತ್ತಿದ್ದು, ನಿಷೇಧಿತ ಮಾದಕ ವಸ್ತುಗಳ ಮಾರಾಟ/ಸರಬರಾಜು/ಬಳಕೆಯನ್ನು ತಡೆಗಟ್ಟುವ ಹಿನ್ನೆಲೆಯಲ್ಲಿ ಸೂರಜ್.ಪಿ.ಎ, ಡಿಎಸ್‌ಪಿ, ಮಡಿಕೇರಿ ಉಪವಿಭಾಗ, ಚಂದ್ರಶೇಖರ್.ಹೆಚ್.ವಿ, ಪಿಐ, & ಹೆಚ್.ಈ.ವೆಂಕಟ್, ಪಿಎಸ್‌ಐ, ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆ ಮತ್ತು ಸಿಬ್ಬಂದಿಗಳ ತಂಡವನ್ನು ರಚಿಸಿ ತನಿಖೆ ಕೈಗೊಂಡು ಮಾಹಿತಿ ಸಂಗ್ರಹಿಸಿ ದಿ: 28-02-2025 ರಂದು ಗಾಳಿಬೀಡು ಗ್ರಾಮದ ಗಣಪತಿ ದೇವಸ್ಥಾನದ ಸಮೀಪ ನಿಷೇಧಿತ ಮಾದಕ ವಸ್ತುವನ್ನು ಸರಬರಾಜು/ಮಾರಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಹಿನ್ನೆಲೆಯಲ್ಲಿ ದಾಳಿ ನಡೆಸಿ ಬೆಟ್ಟತ್ತೂರು ಗ್ರಾಮದ ನಿವಾಸಿ ಕಿರಣ್ ಕುಮಾರ್.ಜಿ.ಆರ್. (35 ವರ್ಷ) ಎಂಬಾತನನ್ನು 43 ಗ್ರಾಂ ಗಾಂಜಾ ನಿಷೇಧಿತ ಮಾದಕ ವಸ್ತುವಿನೊಂದಿಗೆ ದಸ್ತಗಿರಿ ಮಾಡಿ ಘನ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿರುತ್ತದೆ,
Back to top button
error: Content is protected !!