ಪ್ರಕಟಣೆ

ಗೌಡ ಸಮುದಾಯ ಕರೆ ನೀಡಿದ್ದ ಹಿಂದೂ ಭಕ್ತರ ನಡೆ ಮೃತ್ಯುಂಜಯ ಕ್ಷೇತ್ರದ ಕಡೆ ರಾಲಿ ಮುಂದೂಡಿಕೆ

ಕುಶಾಲನಗರ, ಡಿ 30: ಗೌಡ ಸಮುದಾಯ ಕರೆಯಂತೆ ಇಂದು ಕಟ್ಟೆಮಾಡು ಮೃತ್ಯುಂಜಯ ದೇವಸ್ಥಾನದಲ್ಲಿ ಹಮ್ಮಿಕೊಂಡಿದ್ದ, “ಸಹಸ್ರಾರು ಹಿಂದೂ ಭಕ್ತರ ನಡೆ ಮೃತ್ಯುಂಜಯ ಕ್ಷೇತ್ರದ ಕಡೆಗೆ” ರ್ಯಾಲಿ ಮುಂದೂಡಲಾಗಿದೆ.

ಕೊಡಗು ಜಿಲ್ಲಾಡಳಿತ 144ನೇ ಸೆಕ್ಷನ್ ಜಾರಿಗೊಳಿಸುವುದರಿಂದ ಮತ್ತು ಎಸ್ ಪಿ ರಾಮರಾಜನ್ ಅವರು ಕೊಡಗಿನಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ನಮ್ಮ ಸಹಕಾರ ಕೋರಿರುವುದರಿಂದ, ಇಂದು ನಡೆಯಬೇಕಾಗಿದ್ದ ರ್ಯಾಲಿಯನ್ನು ತಾತ್ಕಾಲಿಕವಾಗಿ ಮುಂದೂಡಲಾಗಿದ್ದು ಹಿಂದೂ ಭಕ್ತರು ಸಹಕರಿಸುವಂತೆ ಕುಶಾಲನಗರ ಗೌಡ ಯುವಕ ಸಂಘದ ಆಡಳಿತ ಮಂಡಳಿ ಪರವಾಗಿ ಸಂಘದ ಅಧ್ಯಕ್ಷ ಕೊಡಗನ ಹರ್ಷ ಪ್ರಕಟಣೆಯಲ್ಲಿ ಕೋರಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!