ನಿಧನ

ಆಸ್ಪತ್ರೆಗೆ ತೆರಳುತ್ತಿದ್ದ ವ್ಯಕ್ತಿಗೆ ಮಾರ್ಗಮಧ್ಯೆ ಹೃದಯಾಘಾತ

ಕುಶಾಲನಗರ, ನ 06: ಅನಾರೋಗ್ಯ ಹಿನ್ನೆಲೆಯಲ್ಲಿ ಕುಶಾಲನಗರದ‌ ಖಾಸಗಿ ಆಸ್ಪತ್ರೆಗೆ ಆಗಮಿಸುತ್ತಿದ್ದ ಉದ್ಯಮಿ ಮಾರ್ಗಮಧ್ಯೆ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.

ಮಾದಾಪುರದ ಗರಗಂದೂರು‌ ನಿವಾಸಿ ಹರ್ಷಿತ್ ಮೃತ ದುರ್ದೈವಿ. ಅಸೌಖ್ಯದ‌ ಕಾರಣ ಪತ್ನಿಯೊಂದಿಗೆ ಕಾರಿನಲ್ಲಿ ಕುಶಾಲನಗರ ಆಸ್ಪತ್ರೆಯತ್ತ ಆಗಮಿಸುತ್ತಿದ್ದ ಮಾರ್ಗಮಧ್ಯೆ ಗುಡ್ಡೆಹೊಸೂರು ಬಳಿ ತೀವ್ರ ಹೃದಯಾಘಾತ ಸಂಭವಿಸಿದೆ. ಸ್ಥಳೀಯ ಆಟೋ ಚಾಲಕರು ಖಾಸಗಿ ಆಸ್ಪತ್ರೆಗೆ ರವಾನಿಸಿದರಾದರೂ ಹರ್ಷಿತ್ ಮೃತಪಟ್ಟಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!