ಸಾಂಸ್ಕೃತಿಕ

ರಾಜ್ಯಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಕೂಡಿಗೆ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ಚಾಂಪಿಯನ್

ಕುಶಾಲನಗರ, ‌ಮಾ 30:ದಿನಾಂಕ: 29-03-2026 ಭಾನುವಾರ ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ರಥೋತ್ಸವ ಮತ್ತು ಜಾತ್ರಾ ಮಹೋತ್ಸವದ ಅಂಗವಾಗಿ ಮೂರನೇ ದಿನದ ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ “ಕುಣಿಯೋಣ ಬಾರಾ” ನೃತ್ಯ ಸ್ಪರ್ಧೆ ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ರಾಜ್ಯದ ಹಲವು ಜಿಲ್ಲೆಗಳಿಂದ 12 ಕ್ಕೂ ಅಧಿಕ ನೃತ್ಯ ತಂಡಗಳು ಭಾಗವಹಿಸಿದ್ದರು. ಅದರಲ್ಲಿ ಕೂಡಿಗೆಯ ಹೆಸರಾಂತ ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿಯ ನೃತ್ಯ ಪಟುಗಳು ಅತ್ಯದ್ಭುತ ಮತ್ತು ರೋಮಾಂಚನಕಾರಿ ನೃತ್ಯದ ಮೂಲಕ ತೀರ್ಪುಗಾರರ ಮನಗೆದ್ದು ಉತ್ತಮ ತೀರ್ಪಿನೊಂದಿಗೆ ಪ್ರಥಮ ಬಹುಮಾನ ಪಡೆಯುವುದರ ಮೂಲಕ ಕುಣಿಯೋಣ ಬಾರಾ ರಾಜ್ಯ ಮಟ್ಟದ ನೃತ್ಯ ಸ್ಪರ್ಧೆಯಲ್ಲಿ ಚಾಂಪಿಯನ್ ಪಟ್ಟವನ್ನು ತನ್ನ ಮುಡಿಗೇರಿಸಿಕೊಂಡರು. ಎ ಕ್ರಿಯೇಟಿವ್ ಡ್ಯಾನ್ಸ್ ಅಕಾಡೆಮಿ ವಿಧ್ಯಾರ್ಥಿಗಳ ನೃತ್ಯವನ್ನು ವೀಕ್ಷಿಸಿದ ಗ್ರಾಮಸ್ಥರು ಕುಣಿದು ಕುಪ್ಪಳಿಸಿ ಎದ್ದು ನಿಂತು ಚಪ್ಪಾಳೆಯ ಮೂಲಕ ಪ್ರೋತ್ಸಾಹಿಸಿದರು. ನೃತ್ಯ ಸ್ಪರ್ಧೆಗೆ ತೀರ್ಪುಗಾರರಾಗಿ ಮಂಗಳೂರಿನ ಹೆಸರಾಂತ ನೃತ್ಯ ಸಂಯೋಜಕರಾದ ಶ್ರೀ ಮನೋಜ್ ಕಿಶನ್ ರವರು , ಶಿವಮೊಗ್ಗದ ಹೆಸರಾಂತ ನೃತ್ಯ ಸಂಯೋಜಕಿ ಶ್ರೀಮತಿ ಚಂದನರವರು ಮತ್ತು ಕುಶಾಲನಗರದ ಹೆಸರಾಂತ ನೃತ್ಯ ಶಿಕ್ಷಕರಾದ ಶ್ರೀ ಮಾಸ್ಟರ್ ಶಂಕರಯ್ಯ ರವರು ತಮ್ಮ ಉತ್ತಮ ತೀರ್ಪಿನ್ನು ನೀಡಿದರು. ಕಾರ್ಯಕ್ರಮದಲ್ಲಿ ವಿಜೇತರಾದ ತಂಡಕ್ಕೆ ಕಣಿವೆ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಸೇವಾ ಸಮಿತಿಯ ಅಧ್ಯಕ್ಷರು ಸರ್ವ ಸದಸ್ಯರು ಮತ್ತು ತೀರ್ಪುಗಾರರು ಬಹುಮಾನ ವಿತರಿಸಿ ತಂಡಕ್ಕೆ ಅಭಿನಂದಿಸಿದರು. ಕಾರ್ಯಕ್ರಮದ ನಿರೂಪಣೆಯನ್ನು ಮೈಸೂರಿನ ಹೆಸರಾಂತ ಶ್ರೀ ಮನೋಜ್ ಕುಮಾರ್ ರವರು ತಮ್ಮ ನಿರೂಪಣೆ ಮತ್ತು ಮಿಮಿಕ್ರಿ ಮೂಲಕ ಪ್ರೇಕ್ಷಕರ ಗಮನ ಸೆಳೆದರು. ಕಾರ್ಯಕ್ರಮದ ಕೊನೆಯವರೆಗೂ ವೀಕ್ಕ್ಷಣೆ ಮಾಡಿದ ಗ್ರಾಮಸ್ಥರು ಕುಣಿದು ಕುಪ್ಪಳಿಸುವ ಮೂಲಕ ಪ್ರೋತ್ಸಾಹಿಸಿ ತಂಡಗಳಿಗೆ ಅಭಿನಂದಿಸಿದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!