ಕುಶಾಲನಗರ, ಅ 03: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿಜಯನಗರ ಗ್ರಾಮದಲ್ಲಿರುವ ಶ್ರೀ ಮತ್ ದುರ್ಗಾಪರಮೇಶ್ವರಿ ದೇವಸ್ಥಾನ ಸೇವಾ ಟ್ರಸ್ಟ್ ವತಿಯಿಂದ 13ನೇ ವರ್ಷದ ನವರಾತ್ರಿ ದಸರಾ ಉತ್ಸವವು ಶ್ರಧ್ಧಾಭಕ್ತಿಯಿಂದ ವಿವಿಧ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳ ಮೂಲಕ ನಡೆಯಿತು.
ನವರಾತ್ರಿ ಪೂಜ್ಯೋತ್ಸವ ಅಂಗವಾಗಿ ಕಾವೇರಿ ನದಿಯಿಂದ ಗಂಗಾ ಕಳಸ ತಂದು, ದೇವಿಗೆ ಅಭಿಷೇಕ, ಅಲಂಕಾರ, ದಶದ್ರವ್ಯ ದುರ್ಗಾ ಹೋಮ, ಗಣಪತಿ ಹೋಮ ನಡೆದು ನಂತರ ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ, ನಂತರ ಅನ್ನಸಂರ್ತಪಣೆ ಕಾರ್ಯ ನಡೆಯಿತು.
ನಂತರ ಭವ್ಯ ವಿದ್ಯುತ್ ಅಲಂಕೃತವಾದ ಮತ್ತು ವಿವಿಧ ಬಗೆಯ ಹೂವಿನ ಅಲಂಕಾರದಿಂದ ಕೂಡಿದ ಭವ್ಯ ಮಂಟಪದಲ್ಲಿ ದೇವಿ ವಿಗ್ರಹವನ್ನು ಕುಳ್ಳಿರಿಸಿ ಪೂಜೆ ಸಲ್ಲಿಸಿ , ನಂತರ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿಸಲಾಯಿತು.
ಪೂಜಾ ಕೈಂಕರ್ಯಗಳನ್ನು ದೇವಾಲಯದ ಅರ್ಚಕ ಸುನಿಲ್ ಭಟ್ ನೆರವೇರಿಸಿದರು. ಪೂಜ್ಯೋತ್ಸವ ಕಾರ್ಯಕ್ರಮದಲ್ಲಿ ಕೂಡಿಗೆ, ಕೂಡುಮಂಗಳೂರು ಗ್ರಾಮ ಪಂಚಾಯತಿ ನೂರಾರು ಭಕ್ತರು ಭಾಗವಹಿಸಿದವರು. ಈ ಸಂದರ್ಭದಲ್ಲಿ ದೇವಸ್ಥಾನ ಟ್ರಸ್ಟ್ ನ ಅಧ್ಯಕ್ಷ ಶಿವಣ್ಣೇಗೌಡ, ಸೇರಿದಂತೆ ಕಾರ್ಯದರ್ಶಿ ಸಮಿತಿಯ ನಿರ್ದೇಶಕರು, ಸದಸ್ಯರು, ಗ್ರಾಮಸ್ಥರು ಹಾಜರಿದ್ದರು.
Back to top button
error: Content is protected !!