ಕ್ರೀಡೆ

ಪದವಿಪೂರ್ವ ಕಾಲೇಜುಗಳ ಕ್ರೀಡಾಕೂಟ:ಮೇಲಾಟ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಅನುಗ್ರಹ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳ ಸಾಧನೆ

ಕುಶಾಲನಗರ, ನ 04:ಕರ್ನಾಟಕ ಸರ್ಕಾರ ಶಾಲಾ ಶಿಕ್ಷಣ ಇಲಾಖೆ ಪದವಿ ಪೂರ್ವ ಕೊಡಗು ಜಿಲ್ಲೆ, ಮಡಿಕೇರಿ. ಮತ್ತು ಕಾವೇರಿ ಪದವಿ ಪೂರ್ವ ಕಾಲೇಜು ಗೋಣಿಕೊಪ್ಪ ಇವರ ಸಯುಕ್ತ ಆಶ್ರಯದಲ್ಲಿ ಕೊಡಗು ಜಿಲ್ಲಾ ಮಟ್ಟದ ಸೋಮವಾರಪೇಟೆ ತಾಲೂಕು ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದ ಮೇಲಾಟ ಅಥ್ಲೆಟಿಕ್ ಸ್ಪರ್ಧೆಯಲ್ಲಿ ಅನುಗ್ರಹ ಪದವಿಪೂರ್ವ ಕಾಲೇಜಿನ ಸೃಜನ್, ಬಿ ವಿ , ಪ್ರಜ್ವಲ ಪಿ ನಾಯಕ್, ಶಶಾಂಕ್ ಗೌಡ ,ತರುಣ್ ಏ ನಾಯಕ್, ಸುಬ್ಬಯ್ಯ, ಯಶ್ವಿನ್ ನಾಚಪ್ಪ, ಮತ್ತು ಶರತ್ ಮುಂತಾದ ವಿದ್ಯಾರ್ಥಿಗಳು 3000 ಮೀಟರ್ 1500 ಮೀಟರ್ 800 ಮೀಟರ್100 ಮೀಟರ್ 110 ಮೀಟರ್ 400 ಮೀಟರ್ ರಿಲೇ ಮುಂತಾದ ಮೇಲಾಟಗಳಲ್ಲಿ ಭಾಗವಹಿಸಿರುತ್ತಾರೆ ಇವರಲ್ಲಿ ಪ್ರಜ್ವಲ್ ಪಿ ನಾಯಕ್ 400 ಮೀಟರ್ 200 ಮೀಟರ್ ಮತ್ತು 400 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ಚಾಂಪಿಯನ್ನಾಗಿ ಹೊರಹೊಮ್ಮಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ. ಶಶಾಂಕ್ ಗೌಡ 3000 ಮೀಟರ್ , ಕ್ರಾಸ್ ಕಂಟ್ರಿಯಲ್ಲಿ ಹಾಗೂ 400 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದಿರುತ್ತಾನೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ ಸೃಜನ್ ಬಿ ವಿ 800 ಮೀಟರ್ ಪ್ರಥಮ ಮತ್ತು 400 ಮೀಟರ್ ರಿಲೇಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆ ಆಗಿರುತ್ತಾನೆ ತರುಣ್ ಎ ನಾಯಕ್ ಅಡಲ್ಟ್ 110 ಮೀಟರ್ ಪ್ರಥಮ ಮತ್ತು 400 ಮೀಟರ್ ರೀಲೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿರುತ್ತಾನೆ ಈ ಮೇಲ್ಕಂಡ ನಾಲ್ಕು ಜನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ ಇವರಿಗೆ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷರು ಉಪಾಧ್ಯಕ್ಷರು ನಿರ್ದೇಶಕರು, ಪ್ರಾಂಶುಪಾಲರು ದೈಹಿಕ ಶಿಕ್ಷಣ ನಿರ್ದೇಶಕರು ಹಾಗೂ ಎಲ್ಲಾ ಉಪನ್ಯಾಸಕವಂದದವರು ಮತ್ತು ಆಡಳಿತ ವರ್ಗದವರು ಅಭಿನಂದನೆ ಸಲ್ಲಿಸಿರುತ್ತಾರೆ ಇವರ ಜೊತೆಗೆ ಸುಬ್ಬಯ್ಯ, ನಾಚಪ್ಪ, ಶರತ್ ಮುಂತಾದ ವಿದ್ಯಾರ್ಥಿಗಳು ಸಹ 400 ಮೀಟರ್ ರಿಲೇಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ ಕಾಲೇಜಿಗೆ ಕೀರ್ತಿ ತಂದಿರುತ್ತಾರೆ ಇವರನ್ನು ಸಹ ಕಾಲೇಜಿನ ವತಿಯಿಂದ ಅಭಿನಂದಿಸಲಾಗಿದೆ

Related Articles

Leave a Reply

Your email address will not be published. Required fields are marked *

Back to top button
error: Content is protected !!