ಕುಶಾಲನಗರ, ಜು 18: ಕುಶಾಲನಗರ ಕಾವೇರಿ ನದಿ ತಟದ ನಿವಾಸಿಗಳಲ್ಲಿ ಪ್ರಸಕ್ತ ಮಳೆ ಮತ್ತೆ ಪ್ರವಾಹ ಆತಂಕ ಸೃಷ್ಟಿಸಿದೆ. ಕಾವೇರಿ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗುತ್ತಿದ್ದು ತಗ್ಗು ಪ್ರದೇಶದ ಕೃಷಿ ಭೂಮಿಯನ್ನು ಆವರಿಸಿಕೊಳ್ಳುತ್ತಿದೆ. ಇದೀಗ ಪ್ರವಾಹ ಪೀಡಿತ ಬಡಾವಣೆಯಾದ ಸಾಯಿ ಬಡಾವಣೆಯತ್ತ ಕಾವೇರಿ ನೀರು ನುಗ್ಗಲು ಪ್ರಾರಂಭಿಸಿದೆ. ಸ್ಥಳಕ್ಕೆ ಸ್ಥಳೀಯ ಆಡಳಿತ ಅಧಿಕಾರಿ ವರ್ಗ, ಪೊಲೀಸರು ಭೇಟಿ ನೀಡಿ ಪರಿಶೀಲಿಸಿ ಸಾಯಿ ಮಂದಿರ ಬಳಿ ಬ್ಯಾರಿಕೆಡ್ ಅಳವಡಿಸಿದ್ದಾರೆ. ಇದು ನಿವಾಸಿಗಳಲ್ಲಿ ಮತ್ತಷ್ಟು ಆತಂಕ ಉಂಟುಮಾಡಿದೆ. ತಡರಾತ್ರಿ, ಮುಂಜಾನೆ ವೇಳೆಗೆ ಮಳೆಯ ತೀವ್ರತೆ ಯಾವ ಪರಿಸ್ಥಿತಿ ಉಂಟುಮಾಡಲಿದೆ ಎಂದು ಚಿಂತಾಕ್ರಾಂತರಾಗಿದ್ದಾರೆ.
Back to top button
error: Content is protected !!