ವಿಶೇಷ

ಆಳೆತ್ತರಕ್ಕೆ ಬೆಳೆದ ಬದನೆಕಾಯಿ ಗಿಡ: ಹಾಸ್ಟೆಲ್ ಅಡುಗೆ ತಯಾರಕನ ಕೈಚಳಕ

ಕುಶಾಲನಗರ ಅ12:  ಆಲೂರು- ಸಿದ್ದಾಪುರ ಗ್ರಾಮದ ಪಂಚಾಯತಿ ವ್ಯಾಪ್ತಿಯ ಅಲೂರಿನಲ್ಲಿರುವ ಬಿ ಸಿ ಎಂ ಹಾಸ್ಟೆಲ್ ನ ಖಾಲಿ 25 ಸೇಂಟ್‌ ಜಾಗಲ್ಲಿ ಹಾಸ್ಟೆಲ್ ನಲ್ಲಿ ಅಡಿಗೆ ತಯಾರಿಸುವ ವ್ಯಕ್ತಿ ಶಿವರಾಜ್ ಬಿಡುವಿನ ಸಮಯದಲ್ಲಿ ಆಳೆತ್ತರದ ಬದನೆಕಾಯಿ ಗಿಡಗಳು ಸೇರಿದಂತೆ ಇತರ ತರಕಾರಿ ಗಿಡ ಮತ್ತು ಸಿಹಿ ಕುಂಬಳಕಾಯಿ ಬಳ್ಳಿಯ ಗಿಡಗಳನ್ನು ಬೆಳೆದಿರುತ್ತಾರೆ.
ಬಿ ಸಿ ಎಂ ಹಾಸ್ಟೆಲ್ ವಿಧ್ಯಾರ್ಥಿಗಳಿಗೆ ಅಡುಗೆ ತಯಾರಿಸುವ ಶಿವರಾಜ್ ಎಂಬುವರು ಈ ಜಾಗದಲ್ಲಿ ನೀರಿನ ಸೌಲಭ್ಯವಿರುವುದನ್ನು ಅರಿತು ಕೊಣನೂರು ಸಮೀಪದ ಹಡ್ರಿಂಗಿ ಕೃಷಿ ಪಾರಂ ನಲ್ಲಿ ಹೈಬ್ರೀಡ್ ತಳಿಯ ನೂರು ಬದನೆಕಾಯಿ ಗಿಡಗಳನ್ನು ಖರೀದಿಸಿ ತಂದು ಸ್ವತಃ ಕೆಲಸವನ್ನು ಮಾಡಿ ನೆಡಲಾಗಿತ್ತು ಈ ಗಿಡಗಳು ಆಳೆತ್ತರಕ್ಕೆ ಬೆಳೆಯುವುದರ ಜೊತೆಗೆ 4 ಅಡಿಗಳ ಅಗಲದಲ್ಲಿ ಮೂರು ತಿಂಗಳಿಗೆ ಮೂರು ಕ್ವಿಂಟಾಲ್ ಕ್ಕೂ ಹೆಚ್ಚು ಬದನೆಯಕಾಯಿ ಬಿಟ್ಟಿರುತ್ತವೆ. ಈ ಬದನೆಯಕಾಯಿಗಳನ್ನು ಹಾಸ್ಟೆಲ್ ಬಳಕೆಗೆ ಮತ್ತು ಅಕ್ಕ ಪಕ್ಕದ ಹಾಸ್ಟೆಲ್ ಗಳಿಗೂ ನೀಡಲಾಗಿದೆ.
ಸ್ಧಳಕ್ಕೆ ತೆರಳಿದ ಸುದ್ದಿಗಾರರು ಗಮನಿಸಿದಾಗ ಹಾಸ್ಟೆಲ್ ಮಕ್ಕಳು ಕೈ ಕಾಲು ತೊಳೆಯುವ ನೀರು ಹಿಂಗುಗುಂಡಿಗೆ ಹೋಗುವ ಬದಲು ನೀರು ತೋಟದ ಕಡೆಗೆ ಹೋಗುವುದನ್ನು ಬಳಕೆ ಮಾಡಿಕೊಂಡು ಕೈ ತೋಟದ ಮಾದರಿಯಲ್ಲಿ ಬೆಳೆಯಲಾಗಿ, ಅರು ಅಡಿಗಳಷ್ಟು . ಬದನೆಕಾಯಿಯ ಗಿಡ ಗಳನ್ನು ಬೆಳೆಯುವುದರ ಜೊತೆಗೆ ಅಡಿಗೆಗೆ ಉಪಯುಕ್ತವಾದ ಸೊಪ್ಪುಗಳು ಬೆಳೆಯಲಾಗಿದೆ .

Related Articles

Leave a Reply

Your email address will not be published. Required fields are marked *

Back to top button
error: Content is protected !!