ಕುಶಾಲನಗರ, ಮೇ 27 ಕೂಡಿಗೆಯಲ್ಲಿ ನಡೆದ ರಸ್ತೆ ಅಪಘಾತದಲ್ಲಿ ದ್ವಿಚಕ್ರ ಸವಾರ ಸಾವನ್ನಪಿದ ಘಟನೆ ಶನಿವಾರ ತಡರಾತ್ರಿ ಸಂಭವಿಸಿದೆ.
ಪಿರಿಯಾಪಟ್ಟಣ ತಾಲೂಕಿನ ಹೊನ್ನಾಪುರ ನಿವಾಸಿ ರಘುನಾಥ್ (38) ಮೃತ ದುರ್ದೈವಿ. ಮನೆಗೆ ತೆರಳುತ್ತಿದ್ದ ವೇಳೆ ಎದುರಾದ ಕಾರು ಹಾಗೂ ಮೃತನ ಬೈಕ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಗಂಭೀರ ಗಾಯಗೊಂಡ ರಘುನಾಥ್ ಅವರನ್ನು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರಕ್ಕೆ ರವಾನಿಸಿದರೂ ತೀವ್ರ ಸ್ವರೂಪದ ಘಾಸಿಯಿಂದ ಮೃತಪಟ್ಟಿದ್ದಾನೆ.
ಕಾರು ಚಾಲಕ ಗುಡ್ಡೆಹೊಸೂರು ಸಮೀಪದ ಬೊಳ್ಳೂರು ನಿವಾಸಿ ಸಂಜಯ್ ಎಂಬಾತನ ವಿರುದ್ದ ಪ್ರಕರಣ ದಾಖಲಿಸಿಕೊಂಡಿರುವ ಕುಶಾಲನಗರ ಗ್ರಾಮಾಂತರ ಠಾಣಾ ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ.
Back to top button
error: Content is protected !!