ಕುಶಾಲನಗರ, ಆ. 11: ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಅಣೆಕಟ್ಟೆಯ ಮುಂಭಾಗದಲ್ಲಿರುವ ತೋಟಗಾರಿಕಾ ಕೃಷಿ ಕ್ಷೇತ್ರದ ಸಭಾಂಗಣದಲ್ಲಿ ತೋಟಗಾರಿಕಾ ಪಿತಾಮಹ ಡಾ. ಎಂ.ಹೆಚ್ ಮರಿಗೌಡ ನವರ ಜನ್ಮ ದಿನಾಚರಣೆಯನ್ನು ರೈತರ ಸಮ್ಮುಖದಲ್ಲಿ ಆಚರಣೆ ನಡೆಸಲಾಯಿತು.
ಜ್ಯೋತಿ ಬೆಳಗುವರ ಮೂಲಕ ಹಾರಂಗಿ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ವರದರಾಜ್ ಮಾತಾನಾಡಿ ಭಾರತ ದೇಶದ ತೋಟಗಾರಿಕಾ ಪಿತಾಮಹ ಡಾ. ಎಂ.ಹೆಚ್. ಮರಿಗೌಡ ನವರು ಕರ್ಣಾಟಕ ರಾಜ್ಯದಲ್ಲಿ 1963 ರಲ್ಲಿ ಕೃಷಿ ಇಲಾಖೆಯಿಂದ ತೋಟಗಾರಿಕಾ ಇಲಾಖೆಯನ್ನು ಪ್ರತ್ಯೇಕವಾಗಿ ಬೇರ್ಪಡಿಸಿ, ತೋಟಗಾರಿಕೆ ಇಲಾಖೆಯಲ್ಲಿ 10. ವರ್ಷಗಳ ಕಾಲ ರಾಜ್ಯ ತೋಟಗಾರಿಕಾ ಇಲಾಖೆಯ ನಿರ್ದೇಶಕರಾಗಿ ಸೇವೆ ಸಲ್ಲಿಸಿ ,ನಂತರ ತೋಟಗಾರಿಕೆ ಇಲಾಖೆಯಲ್ಲಿ ದೇಶೀಯ, ಮತ್ತು ವಿದೇಶೀಯ ತೋಟಗಾರಿಕಾ ಬೆಳೆಯನ್ನು ಬೆಳೆಯಲು ಇಲಾಖೆಗೆ, ಮತ್ತು ರೈತರಿಗೆ ಉತ್ತೇಜನ ನೀಡುವ ಮೂಲಕ ತೋಟಗಾರಿಕಾ ಬೆಳೆಗಳ ಅಭಿವೃದ್ಧಿಗೆ ಕಾರಣಿಭೂತರಾಗಿರುತ್ತಾರೆ. ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕಾ ಸಹಾಯಕಿ ಚಂದ್ರಕಲಾ , ಗುಮಾಸ್ತೆ ಲೇಖಾ , ಕಛೇರಿ ಸಿಬ್ಬಂದಿ ವರ್ಗದವರು, ಸೇರಿದಂತೆ ನೂರಾರು ರೈತರು ಹಾಜರಿದ್ದರು. ಇದೇ ಸಂದರ್ಭದಲ್ಲಿ ಸರಕಾರದ ನಿಯಮಾನುಸಾರ ಮೆಣಸು ಬಳ್ಳಿಗಳ ಕಡ್ಡಿಗಳನ್ನು ರೈತರಿಗೆ ವಿತರಣೆ ಮಾಡಲಾಯಿತು.
Back to top button
error: Content is protected !!