ಧಾರ್ಮಿಕ

ಚಿಕ್ಕತ್ತೂರು : ಕಲ್ಲುರ್ಟಿ ಪಾಷಾಣಮೂರ್ತಿ, ಮಹಾಕಾಳಿ ಪೂಜಾ ಮಹೋತ್ಸವ

ಕುಶಾಲನಗರ, ಮೇ 02: ಸಮೀಪದ ಚಿಕ್ಕತ್ತೂರು ಗ್ರಾಮದಲ್ಲಿ ಶುಕ್ರವಾರ ಏರ್ಪಡಿಸಿದ್ದ ಕಲ್ಲುರ್ಟು ಪಾಷಾಣಮೂರ್ತಿ ಹಾಗೂ ಮಹಾಕಾಳಿ ದೇವಸ್ಥಾನದ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕ್ತಿಯಿಂದ ನಡೆಯಿತು.

ಪೂಜಾ ಕಾರ್ಯದಲ್ಲಿ ಪಾಲ್ಗೊಂಡು ಅವರು ಭಕ್ತರಿಗೆ ಆರ್ಶೀವಾಚನ ನೀಡಿದ ಆದಿಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ,ಸಮಾಜ ಧರ್ಮದ ತಳಹದಿಯ ಮೇಲೆ ನಿಂತಿದ್ದು, ಪ್ರತಿಯೊಬ್ಬರೂ ಆಧ್ಯಾತ್ಮಿಕ ಚಿಂತನೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಹೇಳಿದರು.

ವಿಶ್ವಕ್ಕೇ ಮಾದರಿಯಾದ ಸನಾತನ ಧರ್ಮ, ಭಾರತೀಯ ಸಂಸ್ಕೃತಿ ಮತ್ತು ಧಾರ್ಮಿಕ ಚಿಂತನೆಗಳ ಅರಿವನ್ನು ಮಕ್ಕಳಲ್ಲಿ ಮೂಡಿಸಬೇಕು.ಭಗವಂತನ ಆರಾಧನೆಯ ಮೂಲಕ ಬದುಕು ಸಾರ್ಥಕತೆಯನ್ನು ಪಡೆಯುತ್ತದೆ. ಜೀವನ ಧರ್ಮವನ್ನು ಕಲಿಸುವ ಹಿಂದೂ ಧಾರ್ಮಿಕ ಚಿಂತನೆ, ಮೌಲ್ಯಗಳನ್ನು ಮಕ್ಕಳಿಗೆ ಹೇಳಿ ಕೊಡುವ ಮೂಲಕ ಧರ್ಮ ರಕ್ಷಣೆ ಸಾಧ್ಯವಾಗುತ್ತದೆ ಎಂದರು.

ವೈಜ್ಞಾನಿಕ ಪ್ರಗತಿಯ ಹೆಸರಿನಲ್ಲಿ ನಡೆಸುವ ಆಧುನಿಕ ಜೀವನ ಶೈಲಿಯಿಂದ ಸಂಬಂಧ, ಬಾಂಧವ್ಯ ಇನ್ನೂ ಮುಂತಾದ ಮಾನವಿಯ ಮೌಲ್ಯಗಳು ಕಡಿಮೆಯಾಗುತ್ತದೆ. ಇಂತಹ ಮೌಲ್ಯಗಳು ಉಳಿಯಬೇಕಾದರೆ ಆಧ್ಯಾತ್ಮಿಕ, ಧಾರ್ಮಿಕ ಮತ್ತು ಗುರುಹಿರಿಯರ ಮಾರ್ಗದರ್ಶನ ತುಂಬ ಅಗತ್ಯವಾಗಿದೆ ಎಂದು ಹೇಳಿದರು.

ಈ ಸಂದರ್ಭ ಕಲ್ಲುರ್ಟು ಪಾಷಾಣಮೂರ್ತಿ ಹಾಗೂ ಮಹಾಕಾಳಿ ದೇವಸ್ಥಾನ ಮುಖ್ಯಸ್ಥ ಸಿ.ವಿ.ನಾಗೇಶ್ ,ಸಮಾಜದ ಮುಖಂಡರಾದ ತಾಕೇರಿ ಮುತ್ತಣ್ಣ, ಎಸ್.ಬಿ. ಭರತ್,ಎಂ.ಕೆ.ದಿನೇಶ್, ಕುಮಾರ್, ಎಂ.ಡಿ.ರಂಗಸ್ವಾಮಿ, ಕೆ.ಕೆ.ಹೇಮಂತಕುಮಾರ್,ಪುಂಡಾರೀಕಾಕ್ಷ,ಕುಮಾರಪ್ಪ,ರಾಮಚಂದ್ರ, ನಾಗೇಗೌಡ, ಟ್ರಸ್ಟಿ ಚೇತನಾ ನಾಗೇಶ್ ಹಾಗೂ ಕುಟುಂಬಸ್ಥರು ,ಮತ್ತಿತರರು ಇದ್ದರು.

ಅನ್ನದಾನ : ಕಲ್ಲುರ್ಟಿ ಪಾಷಾಣಮೂರ್ತಿ, ಮಹಾಕಾಳಿ ವಾರ್ಷಿಕ ಪೂಜಾ ಮಹೋತ್ಸವ ಶ್ರದ್ಧಾಭಕಯಿಂದ ನಡೆಯಿತು. ಭಕ್ತರಿಗೆ ಅನ್ನದಾನ ವ್ಯವಸ್ಥೆ ಮಾಡಲಾಯಿತು.

ವಾದ್ಯಗೋಷ್ಠಿ ಹಾಗೂ ಮಹಿಳೆಯರ ಪೂರ್ಣಕುಂಭದೊಂಡಿಗೆ ಶಂಭುನಾಥ ಸ್ವಾಮೀಜಿ ಅವರನ್ನು ಸ್ವಾಗತಿಸಿ ಬರಮಾಡಿಕೊಳ್ಳಲಾಯಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!