
ಕುಶಾಲನಗರ, ಮೇ 03: ವಿಭಿನ್ನ ಕಾನ್ಸೆಪ್ಟ್ ಹೊಂದಿರುವ ಕನ್ನಡ ಚಲನಚಿತ್ರ *ದ ಸೂಟ್* ಸಿನಿಮಾ ಇದೇ ತಿಂಗಳು ಮೇ 17 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ ಎಂದು ಚಿತ್ರದ ನಿರ್ಮಾಪಕಿ ಬಿ.ಮಾಲತಿ ಗೌಡ ತಿಳಿಸಿದರು.
ಕುಶಾಲನಗರದಲ್ಲಿ ಸಿನಿಮಾ ಪ್ರಚಾರ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉತ್ತಮ ಚಿತ್ರಗಳನ್ನು ಪ್ರೇಕ್ಷಕರು ಖಂಡಿತ ಕೈಬಿಡುವುದಿಲ್ಲ ಎಂಬುದಕ್ಕೆ ಇತ್ತೀಚಿನ ಕೆಲವು ಚಿತ್ರಗಳ ಗೆಲುವೇ ಸಾಕ್ಷಿ. ಒಂದೊಳ್ಳೆ ಪ್ರಯತ್ನ ದ ಸೂಟ್ ಕೂಡ ಪ್ರೇಕ್ಷಕರ ಮನ ಗೆಲ್ಲಲಿದೆ. ಎಲ್ಲಾ ಅಂಶಗಳನ್ನು ಈ ಚಿತ್ರ ಒಳಗೊಂಡಿದೆ ಎಂದರು.
ಚಿತ್ರದ ನಿರ್ದೇಶಕ ಭಗತ್ ರಾಜ್ ಮಾತನಾಡಿ, ಸಿನಿಮಾಗಳ ಜೀವನಾಡಿ ಸಿನಿಮಾ ಪ್ರೇಮಿಗಳು. ಈ ಹಿನ್ನಲೆಯಲ್ಲಿ ಎಲ್ಲೆಡೆ ಜನರ ಬಳಿಗೆ ತೆರಳಿ ಪ್ರಚಾರ ಮಾಡಲಾಗುತ್ತಿದೆ. ಹಲವು ಉತ್ತಮ ಕಲಾವಿದರು ಚಿತ್ರದಲ್ಲಿ ನಟಿಸಿದ್ದು ಚಿತ್ರದಲ್ಲಿ ಸಬ್ಜೆಕ್ಟ್ ಹೈಲೆಟ್ ಎಂದು ತಿಳಿಸಿದರು. ಚಿತ್ರದಲ್ಲಿ ಸೂಟ್ ಹೇಗೆ ಹೀರೋ ಆಗಿ ಪಾತ್ರ ನಿರ್ವಹಿಸಿದೆ ಎಂಬ ಕುತೂಹಲಕ್ಕೆ ಪ್ರೇಕ್ಷಕರಿಗೆ ಥಿಯೇಟರ್ ನಲ್ಲಿ ಉತ್ತರ ದೊರೆಯಲಿದೆ.
ಬೆಂಗಳೂರು ಸುತ್ತಮುತ್ತ 58 ದಿನಗಳು ಚಿತ್ರೀಕರಣ ಮಾಡಲಾಗಿದೆ ಎಂದು ತಿಳಿಸಿದರು.
ಚಿತ್ರದ ಪ್ರಮುಖ ನಟ ಸುಜಯ್ ಆರ್ಯ ಹಾಗೂ ಕಲಾವಿದ ಹರೀಶ್ ಮಾತನಾಡಿ, ಈ ಚಿತ್ರವನ್ನು ಪ್ರೋತ್ಸಾಹಿಸಿ ಗೆಲ್ಲಿಸಲು ಮನವಿ ಮಾಡಿದರು.
ದ ಸೂಟ್ ಸಿನಿಮಾದಲ್ಲಿ ಧಾನ್ವಿಕೋಟೆ, ಕಮಲ್, ವಿ.ನಾಗೇಂದ್ರ ಪ್ರಸಾದ್, ಗಡ್ಡ ವಿಜಿ, ಸಿದ್ಲಿಂಗು, ಶ್ರೀಧರ್, ಉಮೇಶ್ ಬಣಕರ್ ಮತ್ತಿತರರು ಪ್ರಮುಖ ಪಾತ್ರದಲ್ಲಿ ನಟಿಸಿದ್ದು, ಕಿರಣ್ ಶಂಕರ್ ಸಂಗೀತ ಸಂಯೋಜನೆ, ಸುರೇಶ್ ಅವರ ಸಂಕಲನ ಹೊಂದಿದೆ.
Back to top button
error: Content is protected !!