ಸಭೆ

ಕರವೇ ಜಿಲ್ಲಾ ಘಟಕದ ಸಭೆ: ಸಂಘಟನೆಗೆ ಸೇರ್ಪಡೆ, ಪದಾಧಿಕಾರಿಗಳ ಆಯ್ಕೆ

ಕುಶಾಲನಗರ, ಫೆ 10: ಟಿ.ಎ. ನಾರಾಯಣಗೌಡರ ಕರ್ನಾಟಕ ರಕ್ಷಣಾ ವೇದಿಕೆಯ ಕೊಡಗು ಜಿಲ್ಲಾ ಘಟಕದ ಸಭೆ ಕುಶಾಲನಗರದ ಪ್ರವಾಸಿ ಮಂದಿರದಲ್ಲಿ ನಡೆಯಿತು.

ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಚರ್ಚಿಸಲಾಯಿತು.
ಇದೇ ಸಂದರ್ಭ ಹಲವು ಮಂದಿ ಸಂಘಟನೆಗೆ ಸೇರ್ಪಡೆಯಾದರು. ನೂತನ ಸದಸ್ಯರಿಗೆ ಆದೇಶ ಪತ್ರ ವಿತರಿಸಲಾಯಿತು. ಇದೇ ಸಂದರ್ಭ ಜಿಲ್ಲೆ, ತಾಲೂಕು ಘಟಕಗಳಿಗೆ ಪದಾಧಿಕಾರಿಗಳನ್ನು ನಿಯೋಜಿಸಿ ಆದೇಶ ಪತ್ರ ವಿತರಿಸಲಾಯಿತು.

ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ರವಿ ಅಜ್ಜಳ್ಳಿ, ಸಂಚಾಲಕರಾಗಿ ಗೋವಿಂದರಾಜದಾಸ್, ಉಪಾಧ್ಯಕ್ಷರಾಗಿ ಮುನಿರ್ ಮಾಚಾರ್, ಸಂಘಟನಾ ಕಾರ್ಯದರ್ಶಿಯಾಗಿ ಮಂಜುನಾಥ್ ಕೆ.ಎನ್, ಕಾರ್ಯದರ್ಶಿಯಾಗಿ ಹೆಚ್.ಕೆ.ರವೀಂದ್ರನಾಥ್, ಮಡಿಕೇರಿ ತಾಲೂಕು‌ ಸಮಿತಿಯ ಅಧ್ಯಕ್ಷರಾಗಿ ಪ್ರವೀಣ್ ಲೋಬೋ, ಗೌರವಾಧ್ಯಕ್ಷರಾಗಿ ಯೋಗೇಶ್, ಉಪಾಧ್ಯಕ್ಷರಾಗಿ ಹೆಚ್.ಪಿ.ರಘು, ಪ್ರಧಾನ ಕಾರ್ಯದರ್ಶಿಯಾಗಿ ಜ್ಞಾನಕುಮಾರ್, ಕಾರ್ಯದರ್ಶಿಯಾಗಿ ಗೌರಮ್ಮ, ಕಾರ್ಮಿಕ ಘಟಕದ ಅಧ್ಯಕ್ಷರಾಗಿ ದೀಪ್ತಿ, ಉಪಾಧ್ಯಕ್ಷೆಯಾಗಿ ಕುಮಾರಿ, ಹೆಬ್ಬಾಲೆ ಹೋಬಳಿ ಅಧ್ಯಕ್ಷರಾಗಿ ಟಿ.ಎಸ್. ಪ್ರಕಾಶ್, ಶನಿವಾರಸಂತೆ ಹೋಬಳಿ ಸಂಘಟನಾ ಕಾರ್ಯದರ್ಶಿಯಾಗಿ ಶಾಹಿದ್ ಖಾನ್, ಕೂಡುಮಂಗಳೂರು ಪಂಚಾಯಿತಿ ವಲಯಾಧ್ಯಕ್ಷರಾಗಿ ಗಿರೀಶ್, ಸಾವಿತ್ರಿ ರಾಜು ಟಿ.ಎನ್, ಉಪಾಧ್ಯಕ್ಷರಾಗಿ ವಾಣಿ ಅವರನ್ನು ನೇಮಕ ಮಾಡಲಾಯಿತು.

ಸಭೆಯಲ್ಲಿ ರಾಜ್ಯ ಸಂಚಾಲಕರು ಹಾಗೂ ಕೊಡಗು ಉಸ್ತುವಾರಿ ದೀಪಾ ಪೂಜಾರಿ ಅವರು, ಕೊಡಗು ಜಿಲ್ಲಾಧ್ಯಕ್ಷ ರಾಜು ಕೆ.ಪಿ, ಪ್ರಧಾನ ಕಾರ್ಯದರ್ಶಿ ರವಿ ಅಜ್ಜಳ್ಳಿ, ಕೊಡಗು ಜಿಲ್ಲಾ ಮಹಿಳಾ ಅಧ್ಯಕ್ಷೆ ಜ್ಯೋತಿ ಕುದುಪಜೆ, ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಆನಂದ್ ಕನ್ನಡಿಗ, ಕುಶಾಲನಗರ ತಾಲೂಕು ಗೌರವಾಧ್ಯಕ್ಷ ಧನರಾಜ್, ಕುಶಾಲನಗರ ತಾಲೂಕು ಅಧ್ಯಕ್ಷ ಬಿ.ಜೆ. ಅಣ್ಣಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ಕುಮಾರ್ ದೇವಾಂಗ, ಕುಶಾಲನಗರ ತಾಲೂಕು ಮಹಿಳಾ ಅಧ್ಯಕ್ಷೆ ರೂಪ ಹಾನಗಲ್, ತಾಲೂಕು ಪ್ರಧಾನ ಕಾರ್ಯದರ್ಶಿ ಶೈಲಾ ದೇವಾಂಗ, ಕುಶಾಲನಗರ ತಾಲೂಕು ಘಟಕದ ಎಲ್ಲಾ ಮುಖಂಡರು, ಕೂಡಿಗೆ ಹೋಬಳಿ ಮಹಿಳಾ ಅಧ್ಯಕ್ಷೆ ಗೀತಾ ರಾಜೇಶ್ ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!