ಕುಶಾಲನಗರ ಮಾ 22: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ವಾಸದೇವ ಮೇಟಿ ಬಣ) ಕೊಡಗು ಘಟಕದ ವತಿಯಿಂದ ಕುಶಾಲನಗರ ತಾಲೂಕಿಗೆ ಒಳಪಡುವ ಗ್ರಾಮಗಳಲ್ಲಿ ಕೃಷಿ ಭೂಮಿಯ ಬೋರ್ ವೆಲ್ ಗಳನ್ನ ಅಕ್ರಮ ಎಂದು ಕೆಇಬಿ ಯವರು ವಿದ್ಯುತ್ ಲೈನ್ ಕಡಿತಗೊಳಿಸಿರುವ ಬಗ್ಗೆ ಮನವಿ ಸಲ್ಲಿಸಲಾಯಿತು.
ಕೊಡಗು ಜಿಲ್ಲಾಧ್ಯಕ್ಷ ಹೆಚ್.ಜೆ. ಶರತ್ ಕುಮಾರ್ ನೇತೃತ್ವದಲ್ಲಿ ಕುಶಾಲನಗರ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಕಛೇರಿಗೆ ಭೇಟಿ ನೀಡಿ ಅಭಿಯಂತರ ಮಂಜುನಾಥ್ ಅವರ ಬಳಿ ಈ ಬಗ್ಗೆ ಚರ್ಚಿಸಲಾಯಿತು.
ವಿದ್ಯುತ್ ಸಂಪರ್ಕ ಕಡಿತಗೊಳಿಸದಂತೆ ಹಾಗೂ ಕಡಿತ ಮಾಡಿದ ಕರೆಂಟ್ ಲೈನ್ ಗಳನ್ನ ಪುನ ಅಳವಡಿಸಲು ಕೋರಿ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ಸಂಘದ ಮೈಸೂರು ಮತ್ತು ಕೊಡಗು ಜಿಲ್ಲಾ ಸಂಚಾಲಕ ಡಾ. ಅರುಣ್ ಕುಮಾರ್, ಗೌರವ ಅಧ್ಯಕ್ಷ ಚಂದ್ರಣ್ಣ, ಉಪಾಧ್ಯಕ್ಷ ಪ್ರಸನ್ನ ರೆಡ್ಡಿ, ತೊರೆನೂರು ಅಧ್ಯಕ್ಷ ಅರುಣ, ಮಾಜಿ ಸೈನಿಕ ಪುಟ್ಟೇಗೌಡ, ಚಂದ್ರಪ್ಪ, ಬನ್ನೂರು ಶಶಿ, ಗಣೇಶ್ ಕಾಸಲ ಗೋಡು ಹಾಗೂ ಪದಾಧಿಕಾರಿಗಳು ಹಾಜರಿದ್ದರು.
ಈ ಸಂಬಂಧ ತಾಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಅವರಿಗೂ ಕೂಡ ಮನವಿ ಸಲ್ಲಿಸಲಾಯಿತು.
Back to top button
error: Content is protected !!