ಕುಶಾಲನಗರ ಮಾ 22 : ಓ.ಡಿ.ಪಿ.ಸಂಸ್ಥೆ, ಮಹಿಳೋದಯ ಮಹಿಳಾ ಒಕ್ಕೂಟ ಕೇಂದ್ರ ಸಮಿತಿ, ಸ್ವ ಸಹಾಯ ಸಂಘಗಳ ಸಹಯೋಗದೊಂದಿಗೆ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಮುಳ್ಳುಸೋಗೆ ಸಮುದಾಯದ ಭವನದಲ್ಲಿ ನಡೆಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಒಡಿಪಿ ಸಂಸ್ಥೆ ಮುಖ್ಯಸ್ಥ ರಮೇಶ್ ಬಾಬು ನೆರವೇರಿಸಿ ನಂತರ ಮಾತನಾಡಿ, ಸರಕಾರದಿಂದ ಸಿಗುವ ವಿವಿಧ ಯೋಜನೆಯ ಸವಲತ್ತುಗಳನ್ನು ಪಡೆಯಲು ಮುಂದಾಗಬೇಕೆಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮೈಸೂರು ಓ.ಡಿ. ಪಿ. ಸಂಸ್ಥೆಯ ಸಂಯೋಜಕಿ ಮೊಲಿಯ ವಹಿಸಿದ್ದರು.
ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲಿ ದಾಪುಗಾಲು ಹಾಕಿ ಸಬಲರಾಗುತ್ತಿದ್ದಾರೆ. ಇನ್ನೂ ಸಹ ಮಹಿಳೆಯರು ವಿವಿಧ ತರಬೇತಿಗಳನ್ನು ಪಡೆದು ಆರ್ಥಿಕ ಮಟ್ಟವನ್ನು ಸುಧಾರಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಮೈಸೂರು ಓ.ಡಿ.ಪಿ.ಸಂಸ್ಥೆಯ ಸಂಯೋಜಕಿ ಲಲಿತಾ, ಜಿಲ್ಲಾ ಸಂಯೋಜಕಿ ಜಾಯ್ಲ್ ಮೆನೇಜಸ್, ಕುಶಾಲನಗರ ಮಹಿಳೋದಯ ಒಕ್ಕೂಟ ಅಧ್ಯಕ್ಷೆ ಮಮತ ಸುನೀಲ್, ಒಕ್ಕೂಟದ ಸದಸ್ಯರಾದ ಮಹಾದೇವಿ, ಸುಂದರ್ ದಾಸ್, ಜಯಂತಿ, ವಿಲಾಸಿನಿ, ಮಮತ, ಸೇರಿದಂತೆ ಓ.ಡಿ.ಪಿ. ಸಂಸ್ಥೆಯ ವಿವಿಧ ಘಟಕದ ಪದಾಧಿಕಾರಿಗಳು ಹಾಜರಿದ್ದರು.
Back to top button
error: Content is protected !!