ಕುಶಾಲನಗರ, ಮಾ 20: ಮಂಗಳವಾರ ನಡೆದ ಆಕಸ್ಮಿಕ ಗುಂಡೇಟು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಮೃತ ಯುವಕ ಸಂತೋಷ್ ಸಹೋದರ ಜಯಪ್ರಕಾಶ್ ಅಗ್ರಹಿಸಿದ್ದಾರೆ.
ಗುಂಡೇಟು ಪ್ರಕರಣ ಸಂದರ್ಭ ಮೃತನ ಜೊತೆಯಲ್ಲಿದ್ದ ಸ್ನೇಹಿತರ ಹೇಳಿಕೆ ಗೊಂದಲಮಯವಾಗಿದೆ. ಈ ಹಿನ್ನಲೆಯಲ್ಲಿ ಪೊಲೀಸರು ಸೂಕ್ತ ತನಿಖೆ ನಡೆಸುವಂತೆ ಜಯಪ್ರಕಾಶ್ ಆಗ್ರಹಿಸಿದ್ದಾರೆ.
ಈ ನಡುವೆ ಘಟನೆ ನಡೆದ ಸ್ಥಳದಲ್ಲಿ ಬೈಲುಕೊಪ್ಪ ಪೊಲೀಸರು ಮಹಜರು ನಡೆಸಿದ್ದಾರೆ. ಘಟನೆ ಸಂದರ್ಭ ಮೃತ ಸಂತೋಷನ ಜೊತೆಯಲ್ಲಿದ್ದ ರವಿಕುಮಾರ್, ಶರತ್, ನೂತನ್ ಅವರನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ. ಘಟನೆಗೆ ಸಂಬಂಧಿಸಿದ ಎಫ್.ಎಸ್.ಎಲ್.ವರದಿ ನಿರೀಕ್ಷಿಸಲಾಗಿದೆ.
ಘಟನೆ ಸಂದರ್ಭ ಕೋವಿ ಹಿಡಿದು ರೀಲ್ಸ್ ಮಾಡುವಾಗ ದುರ್ಘಟನೆ ನಡೆದಿದೆ ಎಂಬ ಊಹಾಪೋಹಗಳು ಕೂಡ ಹರಿದಾಡುತ್ತಿವೆ. ಪೊಲೀಸರ ಹೆಚ್ಚಿನ ತನಿಖೆ ಯಿಂದ ನೈಜಾಂಶ ತಿಳಿದು ಬರಬೇಕಿದ್ದು ಘಟನೆಗೆ ಕಾರಣವೇನು ಎಂಬ ವಿಷಯದ ಬಗ್ಗೆ ಮೃತನ ಕುಟುಂಬ, ಸ್ನೇಹಿತರ ವರ್ಗ ನಿರೀಕ್ಷೆಯಲ್ಲಿದೆ.
Back to top button
error: Content is protected !!