ಕಾರ್ಯಕ್ರಮ

ಕುಶಾಲನಗರದಲ್ಲಿ ಕರ್ನಾಟಕ ಸೆರಾಮಿಕ್ಸ್ & ಸ್ಯಾನಿಟರಿ ಶೋರೂಂ ಅಧಿಕೃತ ಉದ್ಘಾಟನೆ

ಕುಶಾಲನಗರ, ‌ಮಾ 21: ಕುಶಾಲನಗರದ ಬಿಎಂ ರಸ್ತೆಯಲ್ಲಿರುವ ಕಜಾರಿಯ ಕಂಪನಿಯ ಕರ್ನಾಟಕ ಸೆರಾಮಿಕ್ಸ್ & ಸ್ಯಾನಿಟರಿ ಶೋರೂಂ ಅನ್ನು ಗುರುವಾರ ಅಧಿಕೃತವಾಗಿ ಉದ್ಘಾಟಿಸಲಾಯಿತು.

ಸುರೇಶ್ ಮಾಲೀಕತ್ವದ ಈ ಶೋ ರೂಂ ಅನ್ನು ಕಜಾರಿಯ ಕಂಪನಿಯ ಜೂನಿಯರ್ ಮೇನೇಜಿಂಗ್ ಡೈರೆಕ್ಟರ್ ರಿಷಿ ಕಜಾರಿಯ ಉದ್ಘಾಟಿಸಿದರು.

ಶೋಂ ರೂಂ ಉದ್ಘಾಟನೆಗೆ ಆಗಮಿಸಿದ ರಿಷಿ ಕಜಾರಿಯ ಕುಶಾಲನಗರ-ಕೊಪ್ಪ ಗಡಿಯಲ್ಲಿರುವ ಕಾವೇರಿ‌ ಮಾತೆಗೆ ಪೂಜೆ ಸಲ್ಲಿಸಿದರು. ಚಂಡೆ ಮೇಳೆ ವಾದ್ಯಗಳೊಂದಿಗೆ ಅವರನ್ನು ಬರಮಾಡಿಕೊಂಡ ಸ್ಥಳೀಯ ಉದ್ಯಮಿಗಳು ಸನ್ಮಾನಿಸಿ ಗೌರವಿಸಿದರು.

ಈ ಸಂದರ್ಭ ಶೋರೂಂ ಮಾಲೀಕ ಸುರೇಶ್, ಕುಶಾಲನಗರ ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ಉದ್ಯಮಿ ಬಿ.ಎಸ್.ಆರ್.ಜಗದೀಶ್, ಮಹೇಶ್, ಕಮಲೇಶ್ ಸೇರಿದಂತೆ ಕರ್ನಾಟಕ ಸೆರಾಮಿಕ್ಸ್ & ಸಾನಿಟರಿಯ ಬೆಂಗಳೂರು ಘಟಕಗಳ ಮುಖ್ಯಸ್ಥರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!