ಕುಶಾಲನಗರ, ಫೆ 18 : ಕೊಡಗು ಕಲಾವಿದರ ಸಂಘದ ಸಭೆಯು ಮಂಗಳವಾರ ವಿರಾಜಪೇಟೆ ಕೆ.ಕೆ.ಗ್ರೂಪ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಪ್ರಾರಂಭದಲ್ಲಿ ಚಿರುವಾಳಂಡ ಸುಜಲ ನಾಣಯ್ಯ ಪ್ರಾರ್ಥನೆ ಮಾಡುವ ಮೂಲಕ ಸಭೆ ಪ್ರಾರಂಭವಾಯಿತು. ಸಂಘದ ಜಿಲ್ಲಾಧ್ಯಕ್ಷರಾದ ಕೊಟ್ಟುಕತ್ತಿರ ಪ್ರಕಾಶ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು .ಈ ಸಂದರ್ಭದಲ್ಲಿ ಅಧ್ಯಕ್ಷರಾದ ಪ್ರಕಾಶ್ ಮಾತನಾಡಿ ಕೊಡಗು ಕಲಾವಿದರ ಸಂಘ ನೊಂದಣಿ ಆಗಿ ಐದು ವರ್ಷಗಳು ತುಂಬಿದೆ .ಸಂಘ ನೊಂದಣಿಯಾದ ಪ್ರಾರಂಭ ದಿನಗಳಲ್ಲಿ ಸಹಕಾರದ ಕೊರತೆಯಿಂದಾಗಿ ಯಾವುದೇ ರೀತಿಯ ಕಾರ್ಯಕ್ರಮ ಮಾಡಲು ಸಾಧ್ಯವಾಗಲಿಲ್ಲ .ಆದರೆ ಇತ್ತೀಚಿನ ವರ್ಷಗಳಲ್ಲಿ ಹಿರಿಯ ಕಲಾವಿದರಾದ ನೆರವಂಡ ಉಮೇಶ್ ರವರ ಪ್ರೋತ್ಸಾಹ ಹಾಗೂ ಸ್ಥಳೀಯ ಕಲಾವಿದರ ಸಹಕಾರದಿಂದ ನಾಲ್ಕು ಕಾರ್ಯಕ್ರಮ ಯಶಸ್ವಿಯಾಗಿ ನಡೆದಿರುವುದು ಸಂತೋಷದ ವಿಷಯವಾಗಿದೆ.ಸಂಘ ಬೆಳವಣಿಗೆಯ ಹಾದಿಯಲ್ಲಿ ಸಾಗುತ್ತಿರುವ ಕಾರಣ ಸಮಿತಿಯನ್ನು ಪುನರ್ ರಚನೆ ಮಾಡಬೇಕಿದೆ ಹಾಗೂ ಸಂಘದ ಸದಸ್ಯತ್ವ ಆಂದೋಲನ ಮಾಡುವ ಮೂಲಕ ಕೊಡಗಿನ ಎಲ್ಲಾ ಕಲಾವಿದರನ್ನು ಒಟ್ಟುಗೂಡಿಸುವ ಪ್ರಯತ್ನ ಆಗಬೇಕು ಎಂದರು. ಹಿರಿಯ ಕಲಾವಿದರಾದ ನೆರವಂಡ ಉಮೇಶ್ ಮಾತನಾಡಿ ಕೊಡಗಿನ ಎಲ್ಲಾ ಕಲಾವಿದರು ಸೇರಿಕೊಂಡು ಕಲಾವಿದರ ಸಂಘವನ್ನು ಬಲಿಷ್ಠವಾಗಿ ಕಟ್ಟುವ ಮೂಲಕ ನಮ್ಮ ಸ್ಥಳೀಯ ಕಲಾವಿದರ ಪ್ರತಿಭೆಗೆ ಉತ್ತಮವಾದ ಅವಕಾಶವನ್ನು ನೀಡುವ ಎಂದರು .ಸಭೆಯಲ್ಲಿ ಸಂಘದ ಸದಸ್ಯರು ತಮ್ಮ.ತಮ್ಮ ಅಭಿಪ್ರಾಯವನ್ನು ಮುಕ್ತವಾಗಿ ವ್ಯಕ್ತಪಡಿಸಿದರು. ಸ್ವಾಗತ ಸಂಘದ ಪ್ರದಾನ ಕಾರ್ಯದರ್ಶಿ ಈರಮಂಡ ಹರಿಣಿ ವಿಜಯ್ ಹಾಗೂ ವಂದನಾರ್ಪಣೆಯನ್ನು ಮಲ್ಲಮಡ ಶಾಮಲಾ ಸುನೀಲ್ ನೆರವೇರಿಸಿದರು.
Back to top button
error: Content is protected !!