ಕುಶಾಲನಗರ, ಮೇ 12: ವಾಸವಿ ಜಯಂತಿ ಅಂಗವಾಗಿ ಕುಶಾಲನಗರದ ವಾಸವಿ ಯುವಜನ ಸಂಘದ ವತಿಯಿಂದ ಕುಲಬಾಂಧವರಿಗೆ ಒಳಾಂಗಣ ಕ್ರೀಡಾ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು.
ವಾಸವಿ ಮಹಲ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕ್ರೀಡಾಕೂಟದಲ್ಲಿ ಮಕ್ಕಳು, ಮಹಿಳೆಯರು, ಹಿರಿಯರಿಗೆ ಮಾನವ ಹಾವು ಏಣಿ, ಗಟ್ಟಾಭಾರ, ಲೂಡೋ, ಸ್ಲೋ ಸೈಕಲ್ ರೇಸ್ ಸ್ಪರ್ಧೆಗಳನ್ನು ನಡೆಸಲಾಯಿತು.
ವಾಸವಿ ಯುವಜನ ಸಂಘದ ಮಾಜಿ ಅಧ್ಯಕ್ಷ ನಾಗ ಪ್ರವೀಣ್ ಸ್ಪರ್ಧಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸ್ಪರ್ಧೆಯಲ್ಲಿ 150 ಕ್ಕೂ ಅಧಿಕ ಮಂದಿ ಪಾಲ್ಗೊಂಡಿದ್ದರು.
ಈ ಸಂದರ್ಭ ವಾಸವಿ ಯುವಜನ ಸಂಘದ ಅಧ್ಯಕ್ಷ ಪ್ರವೀಣ್, ಪದಾಧಿಕಾರಿಗಳಾದ ರವಿಪ್ರಕಾಶ್, ಭಗವಾನ್, ನಿಖಿಲ್, ಶ್ರೇಯಸ್, ರಾಕೇಶ್, ಗೌತಮ್, ಬಾಲಾಜಿ, ವೈಶಾಖ್ ಸೇರಿದಂತೆ ನಿರ್ದೇಶಕರುಗಳು ಇದ್ದರು.
Back to top button
error: Content is protected !!