ಮನವಿ

ತಾಲ್ಲೂಕು ಸರಕಾರಿ ನೌಕರರ ಸಂಘದ ನಿಯೋಗದಿಂದ ಶಾಸಕರಿಗೆ ಮನವಿ.

ಕೂಡಿಗೆ ಜ 17: ಸೋಮವಾರಪೇಟೆ ತಾಲ್ಲೂಕುಲ ಸರಕಾರಿ ನೌಕರರ ಸಂಘದ ವತಿಯಿಂದ ಸಂಘದ ಪದಾಧಿಕಾರಿಗಳು 7ನೇ ರಾಜ್ಯ ವೇತನ ಪರಿಷ್ಕರಣೆ, ಎನ್, ಪಿ,ಎಸ್, ಜಾರಿ ಹಾಗೂ ನಗದು ರಹಿತ ಚಿಕಿತ್ಸೆ ನೀಡುವ ಕರ್ನಾಟಕ ಅರೋಗ್ಯ ಸಂಜೀವಿನಿ ಯೋಜನೆ ಸೇರಿದಂತೆ ಪ್ರಮುಖ 3 ಬೇಡಿಕೆಗಳನ್ನು ಜಾರಿಗೊಳಿಸುವಂತೆ ಮಡಿಕೇರಿ ಕ್ಷೇತ್ರದ ಶಾಸಕ ಡಾ. ಮಂಥರ್ ಗೌಡ ನವರ ಮುಖಾಂತರ ರಾಜ್ಯ ಸರಕಾರಕ್ಕೆ ಮನವಿಯನ್ನು ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರದೀಪ್ ಕುಮಾರ್ ಮಾತಾಡುತ್ತಾ 7.ನೇ ವೇತನ ಆಯೋಗ ರಚನೆಯಾಗಿ ಈಗಾಗಲೇ 12 ತಿಂಗಳಾಗಿದ್ದು, ಮತ್ತೆ ಕಾಲಾವಕಾಶ ನೀಡದೆ ಬೇಗ ಆಯೋಗದಿಂದ ವರದಿಯನ್ನು ತರಸಿಕೊಂಡು ಜಾರಿಗೊಳಿಸುವಂತೆ ಹಾಗೂ ನೂತನ ಪಿಂಚಣಿ ಯೋಜನೆಯನ್ನು ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆಯನ್ನು ಜಾರಿಗೊಳಿಸುವಂತೆ ಮುಖ್ಯ ಮಂತ್ರಿ ಗಳನ್ನು ಕೋರುವಂತೆ ಶಾಸಕರಲ್ಲಿ ಮನವಿ ಮಾಡಿದರು. ಈ ಸಂದರ್ಭದಲ್ಲಿ ಮಾತಾಡಿದ ಶಾಸಕರು ಸರಕಾರಿ ನೌಕರರ ನ್ಯಾಯಯುತವಾದ 3 ಬೇಡಿಕೆಗಳ ಅನುಷ್ಠಾನಕ್ಕೆ ಮುಖ್ಯ ಮಂತ್ರಿಗೆ ಖುದ್ದಾಗಿ ಮನವಿ ಮಾಡಲಾಗುವುದು ಎಂದರು.
ನಿಯೋಗದವರು ಶಾಸಕರ ನಿವಾಸದಲ್ಲಿ ಮನವಿಯನ್ನು ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪರಿಷತ್ ಸದಸ್ಯರಾದ ವಿ. ಎಸ್. ಸುಗುಣಾನಂದ, ಖಜಾಂಚಿ ದಿನೇಶ್, ಕಾರ್ಯದರ್ಶಿ ನಾಗೇಶ್, ಶಿಕ್ಷಕರ ಸಂಘದ ಅಧ್ಯಕ್ಷ ಬಸವರಾಜ್, ಪ್ರಸನ್ನ ಕುಮಾರ್, ದಯಾನಂದ, ಹಾಗೂ ಇತರೆ ಪದಾಧಿಕಾರಿಗಳು ಹಾಜರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!