ಟ್ರೆಂಡಿಂಗ್

ಶಾಸಕ ಡಾ. ಮಂತರ್ ಗೌಡ ಅವರಿಂದ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಣೆ

ಕುಶಾಲನಗರ, ಜ 17: ದಿನಾಂಕ : 16-01-2024 ಕುಶಾಲನಗರ ತಾಲ್ಲೂಕಿನ ನಂಜರಾಯಪಟ್ಟಣ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಫಲಾನುಭವಿಗಳಿಗೆ / ಗ್ರಾಮಸ್ಥರಿಗೆ ಮಡಿಕೇರಿ ವಿಧಾನಸಭಾ ಕ್ಷೇತ್ರದ ಸನ್ಮಾನ್ಯ ಶಾಸಕರಾದ ಶ್ರೀ ಡಾ. ಮಂತರ್ ಗೌಡ ಅವರು ಕುಶಾಲನಗರ ತಾಲ್ಲೂಕು ದಂಡಾಧಿಕಾರಿರವರ ಕಛೇರಿಯಲ್ಲಿ ತಹಶೀಲ್ದಾರ್ ಕಿರಣ್ ಗೌರಯ್ಯ ರವರ ಸಮ್ಮುಖದಲ್ಲಿ ಹಕ್ಕು ಪತ್ರವನ್ನು ವಿತರಿಸಿದರು.

ಇದೇ ಸಂಧರ್ಭ ಮಾನ್ಯ ಶಾಸಕರು 94c ಮೂಲಕ ತಮ್ಮ ಆಸ್ತಿಯ ಹಕ್ಕು ಪಾತ್ರಕ್ಕಾಗಿ ಅರ್ಜಿ ಹಾಕಿದ್ದ 150 ಕ್ಕೂ ಹೆಚ್ಚು ಫಲಾನುಭವಿಗಳಿಗೆ ಸಧ್ಯದಲ್ಲೇ ಹಕ್ಕು ಪತ್ರವನ್ನು ಮುಂದಿನ ದಿನಗಳಲ್ಲಿ ಮಂಜೂರು ಮಾಡುವ ಸಲುವಾಗಿ ಕುಶಾಲನಗರ ತಾಲ್ಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಅವರಿಗೆ ಕಾರ್ಯಕ್ರಮವನ್ನು ಆಯೋಜಿಸಲು ಸೂಚಿಸಿದರು.

ಇದೇ ಸಂಧರ್ಭ ಮಾನ್ಯ ಶಾಸಕರು ಕುಶಾಲನಗರ ತಾಲ್ಲೂಕು ಕಚೇರಿಯಲ್ಲಿ ಸರ್ಕಾರದ ಆದೇಶದಂತೆ E-office ತಂತ್ರಾಂಶದಲ್ಲಿ ಕಡತಗಳನ್ನು ನಿರ್ವಹಣೆ ಮಾಡಲು E-office ಅನ್ನು ಅನುಷ್ಠಾನಗೊಳಿಸಲು ಉದ್ಘಾಟನೆ ಮಾಡಿದರು.

ನಂತರ ಕುಶಾಲನಗರ ತಾಲ್ಲೂಕು ಕಚೇರಿಗೆ ರೆಕಾರ್ಡ್ ರೂಮ್ ( ಅಭಿಲೇಖನೀಯ ) ಸ್ಥಾಪಿಸಲು ಸ್ಥಳ ಪರಿಶೀಲನೆ ನಡೆಸಲಾಯಿತು…

ಕುಶಾಲನಗರ ಪುರಸಭೆ ಸದಸ್ಯ ಪ್ರಮೋದ್ ಮುತ್ತಪ್ಪ, ಕೆಪಿಸಿಸಿ ಸದಸ್ಯರು ಹಾಗೂ KUDA ದ ಮಾಜಿ ಅಧ್ಯಕ್ಷರು ಆದ ಮಂಜುನಾಥ್ ಗುಂಡೂರಾವ್, ನಟೇಶ್ ಗೌಡ, ಹಿರಿಯರಾದ ಗೋವಿಂದಪ್ಪ ಹಾಗೂ ಪ್ರಮುಖರಾದ ಕಿರಣ್ ಕುಮಾರ್, ಟಿ.ಪಿ ಹಮೀದ್, ರಾಜೀವ್, ಶಿವಶಂಕರ್, ಶೇಖರ್ ಮತ್ತು ಮೊದಲಾದವರು ಉಪಸ್ಥಿತರಿದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!