ಕ್ರೈಂ

ಗಾಂಜಾ ಮಾರಾಟ ಯತ್ನ: ಮೂವರ ಬಂಧನ

ಕುಶಾಲನಗರ, ನ 23: ಕುಶಾಲನಗರ ಟೌನ್ ಪೊಲೀಸ್ ಠಾಣಾ ವ್ಯಾಪ್ತಿಯ ಗುಂಡುರಾವ್ ಬಡಾವಣೆಯ ಜಾತ್ರೆ ಬಾಣೆಯಲ್ಲಿ ಸಾರ್ವಜನಿಕ ಶೌಚಾಲಯದ ಬಳಿ ನಿಷೇಧಿತ ಮಾದಕ ವಸ್ತು ಗಾಂಜಾ ಮಾರಾಟ ಮಾಡಲು ಯತ್ನಿಸುತ್ತಿದ್ದ ಮೂವರನ್ನು ಪೊಲೀಸರು‌ ಬಂಧಿಸಿದ್ದಾರೆ.

ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದಾಗ ಆರೋಪಿಗಳು ಗಿರಾಕಿಗಳಿಗೆ ಮಾರಾಟ ಮಾಡಲು ಇಟ್ಟುಕೊಂಡಿದ್ದ 99 ಗ್ರಾಂ ತೂಕದ ಗಾಂಜಾ ಮತ್ತು ಆರೋಪಿಯ ವಶದಲ್ಲಿದ್ದ ಮೋಟಾ‌ರ್ ಬೈಕನ್ನು ಅಮಾನತ್ತುಪಡಿಸಿಕೊಂಡು, ಆರೋಪಿಗಳಾದ ಪಿರಿಯಾಪಟ್ಟಣ ತಾಲೂಕಿನ ಸೈಯ್ಯದ್ ಅನ್ವರ್ (39)
ಕುಶಾಲನಗರ ನಾಗಮ್ಮ ಮಂಟಿಯ ನಯನ (19), ಕುಶಾಲನಗರ ಗೋಪಾಲ್ ಸರ್ಕಲ್ ನ ಮಂಜುನಾಥ (21) ಎಂಬವರನ್ನು ವಶಪಡಿಸಿಕೊಂಡು
2000 ಮೌಲ್ಯದ 98 ಗ್ರಾಂ ತೂಕದ ಗಾಂಜಾ, ನೊಂದಣಿ ಸಂಖ್ಯೆ ಇಲ್ಲದ ಸ್ಪ್ಲೆಂಡರ್ ಮೋಟಾರ್ ಬೈಕ್ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಡಿವೈಎಸ್ಪಿ ಆರ್.ವಿ ಗಂಗಾಧರಪ್ಪ, ಪೊಲೀಸ್‌ ನಿರೀಕ್ಷಕ ಪ್ರಕಾಶ್.ಬಿ.ಜಿ ಇವರ ಮಾರ್ಗದರ್ಶನದಲ್ಲಿ ಕುಶಾಲನಗರ ಟೌನ್ ಪೊಲೀಸ್ ಠಾಣೆಯ ಪಿಎಸ್ಐ ಗೀತಾ.ಹೆಚ್.ಟಿ. ಹಾಗೂ ಅಪರಾಧ ಪತ್ತೆ ಸಿಬ್ಬಂದಿಗಳಾದ ಎ.ಎಸ್ ಐ ಮಂಜುನಾಥ್, ಸುನೀಲ್, ಬಾಬು, ಜಾವೀದ್, ಶಶಿಕಲಾ ಮತ್ತು ತಾಂತ್ರಿಕ ಸಿಬ್ಬಂದಿಗಳ ತಂಡ ಕಾರ್ಯಾಚರಣೆ ನಡೆಸಿತು.

Related Articles

Leave a Reply

Your email address will not be published. Required fields are marked *

Back to top button
error: Content is protected !!