ಧಾರ್ಮಿಕ
ಕುಶಾಲನಗರದ ವಿವಿಧೆಡೆ ಸಂಭ್ರಮದ ಕ್ರಿಸ್ಮಸ್ ಆಚರಣೆ
ಕುಶಾಲನಗರ ಡಿ 25 : ಕುಶಾಲನಗರ ಪಟ್ಟಣದಲ್ಲಿ
ಸೋಮವಾರ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬ ಹಾಗೂ ಏಸು ಸ್ಮರಣೆ ವಿಜೃಂಭಣೆಯಿಂದ ಆಚರಿಸಿದರು.
ಕುಶಾಲನಗರ, ಕೂಡಿಗೆ, ಸಿದ್ದಲಿಂಗಪುರ ಹಾಗೂ ಏಳನೇ ಹೊಸಕೋಟೆ ಗ್ರಾಮಗಳಲ್ಲಿ ಕ್ರಿಸ್ಮಸ್ ಹಬ್ಬದ ಅಂಗವಾಗಿ ಕ್ರೈಸ್ತ ಬಾಂಧವರು ಹೊಸ ಉಡುಗೆ ತೊಡುಗೆ ಧರಿಸಿ ಸಂತ ಸೆಬಾಸ್ಟೀನರ ದೇವಾಲಯ ಮತ್ತು ಸಿಎಸ್ಐ ಮೇಡಕ್ ಮೆಮೋರಿಯಲ್ ಚರ್ಚ್ ಗೆ ತೆರಳಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಕುಶಾಲನಗರದ ಸಂತ ಸೆಬಾಸ್ಟಿಯನ್ ದೇವಾಲಯದಲ್ಲಿ ಧರ್ಮಗುರು ವಂ.ಫಾ.ಎಂ. ಮಾರ್ಟಿನ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು.
ಕ್ರೈಸ್ತ ಬಾಂಧವರು ತಮ್ಮ ತಮ್ಮ ಮನೆಗಳಲ್ಲಿ ದನಕೊಟ್ಟಿಗೆಯಲ್ಲಿ ಜನಿಸಿದ ಏಸುವಿನ ನೆನಪಿಗಾಗಿ ಗೋದಲಿ ನಿರ್ಮಿಸಿ, ಅದರಲ್ಲಿ ಬಾಲ ಏಸುವಿನ ಹಾಗೂ ಮಾತೆ ಮೇರಿಯ ಗೊಂಬೆ ಸ್ಥಾಪಿಸಲಾಗಿತ್ತು. ಕ್ರಿಸ್ ಮಸ್ ಮರಕ್ಕೆ ಅಲಂಕಾರ, ಮನೆಯನ್ನು ವಿದ್ಯುತ್ ದೀಪಗಳಿಂದ ಶೃಂಗರಿಸಿದ್ದರು. ಕುಶಾಲನಗರ ಸೆಬಾಸ್ಟೀಯನರ ಚರ್ಚ್ ಆಡಳಿತ ಮಂಡಳಿ ಕಾರ್ಯದರ್ಶಿ ಸವರಿನ್ ಡಿಸೋಜ,ಸದಸ್ಯರಾದ ಶಾಜಿ ಕೆ.ಜಾರ್ಜ್, ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಕ್ರೆಜ್ವಲ್ ಕೊಟ್ಸ್, ರಾಯ್, ಯೋಸುದಾಸ್, ಜಾನ್, ಫಿಲಿಪ್ ವಾಸ್, ಅಂಥೋಣಿ ಪ್ರಭುರಾಜ್,ಸೆಲಿನಾ,ಹುರ್ಬಟ್ ಡೈಸ್, ಸುನಿಲ್, ಸುಖಿ, ಶಾಂತಪ್ಪ, ಆಲ್ಬರ್ಟ್, ಪೌಲ್ಸನ್ ಮತ್ತಿತರರು ಭಾಗವಹಿಸಿದ್ದರು.
ಟೋಲ್ ಗೇಟ್ ಬಳಿ ಇರುವ ಸಿಎಸ್ಐ ಮೇಡಕ್ ಚರ್ಚ್ ನಲ್ಲಿ ಕ್ರಿಸ್ಮಸ್ ಅಂಗವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿ ಅವರು ಶುಭ ಸಂದೇಶ ನೀಡಿದರು.ರೆ.ಫಾ.ಸಾಮ್ಯುಯೆಲ್ ಮನೋಜ್ ಕುಮಾರ್,
ಪ್ರತಿಯೊಬ್ಬರು ಶಾಂತಿ,ಸೌಹಾರ್ದತೆಯೊಂದಿಗೆ ಸಮಾಜದಲ್ಲಿ ಸಹಭಾಳ್ಚೆ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭ ಚರ್ಚ್ ಮುಖಂಡರಾದ ಜೋಸೆಫ್ ವಿಕ್ಟರ್ ಸೋನ್ಸ್, ಜಾನ್, ಸುಕುಮಾರ್,ಸುನಂದಕುಮಾರ್,ಸೆಮ್ಮಿಡೆವೀಡ್, ಅಗಸ್ಟಿನ್, ಮಿಲ್ಟನ್,ಅನಿತಾ ಚಾಲ್ಸ್ ,ಮಿಂಟನ್, ಎಡ್ವಿನ್, ರಕ್ಷಾಪ್ರೀಯ, ಸುರೇಶ್ ಬಾಬು, ನವಮಣಿ, ನೆಲ್ಸನ್ ಪಾಲ್ಗೊಂಡಿದ್ದರು.