ಕುಶಾಲನಗರ, ಡಿ 25: ಕೊಡಗು ಜಿಲ್ಲಾ ಕುರುಬ ಸಂಘಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಮಹಾಲಕ್ಷ್ಮಿ ಸಭಾಂಗಣದಲ್ಲಿ ನಡೆಯಿತು.
ಹಿಂದಿನ ಆಡಳಿತ ಮಂಡಳಿ ವಿಸರ್ಜನೆ ಹಿನ್ನಲೆಯಲ್ಲಿ ನೂತನ ಪದಾಧಿಕಾರಿಗಳನ್ನು ಆರಿಸಿ ಕೇಂದ್ರ ಸಮಿತಿ ಶಿಫಾರಸು ಮಾಡುವ ಹಿನ್ನಲೆಯಲ್ಲಿ ಜಿಲ್ಲಾಮಟ್ಟದ ಸಭೆ ನಡೆಯಿತು.
ಸಭೆಯಲ್ಲಿ ನೆರೆದಿದ್ದ ಪ್ರಮುಖರು ಸಂಘವನ್ನು ಬಲಿಷ್ಠವಾಗಿ ರೂಪಿಸಿ ಸರಕಾರದಿಂದ ದೊರಕುವ ಸೌಲಭ್ಯಗಳನ್ನು ಪಡೆದುಕೊಳ್ಳಲು ಸಮರ್ಥ ನಾಯಕರ ಆಯ್ಕೆಗೆ ಕ್ರಮವಹಿಸುವಂತೆ ತಮ್ಮ ಸಲಹೆ, ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು.
ಈ ಹಿನ್ನಲೆಯಲ್ಲಿ ಕೊಡಗು ಜಿಲ್ಲಾ ಅಧ್ಯಕ್ಷರಾಗಿ ಎಚ್.ಎಚ್.ಕೃಷ್ಣ, ಪ್ರಧಾನ ಕಾರ್ಯದರ್ಶಿಯಾಗಿ ಕಿರಣ್ ಕುಮಾರ್, ಕುಶಾಲನಗರ ತಾಲೂಕು ಅಧ್ಯಕ್ಷರಾಗಿ ಪ್ರಸನ್ನ, ವಿರಾಜಪೇಟೆ ತಾಲೂಕು ಅಧ್ಯಕ್ಷರಾಗಿ ಸುಭಾಶ್, ಸೋಮವಾರಪೇಟೆ ತಾಲೂಕು ಅಧ್ಯಕ್ಷರಾಗಿ ಧರ್ಮ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಕುರಿಹುಣ್ಣೆ ಉತ್ಪಾದಕರ ನಿಗಮದ ಜಿಲ್ಲಾಧ್ಯಕ್ಷ ಡಿ.ಆರ್.ಪ್ರಭಾಕರ್ ಮಾತನಾಡಿ, ಸಂಘಟನೆ ಮೂಲಕ ಸಂಘವನ್ನು ಸಮರ್ಥವಾಗಿ ಮುನ್ನಡೆಸಲು, ಸರಕಾರದ ಸೌಲಭ್ಯಗಳನ್ನು ಫಲಾನುಭವಿಗಖಿಗೆ ತಲುಪಿಸಲು, ಸಮಾಜಮುಖಿಯಾಗಿ ಕಾರ್ಯನಿರ್ವಹಿಸುವಂತಹ ಅಭ್ಯರ್ಥಿಗಳು ಸಂಘಕ್ಕೆ ಅವಶ್ಯಕತೆಯಿದೆ. ಈ ನಿಟ್ಟಿನಲ್ಲಿ ಕೇಂದ್ರ ಸಮಿತಿಯ ಸೂಚನೆ ಮೇರೆಗೆ ನೂತನ ಸಮಿತಿಗೆ ಪ್ರಮುಖರನ್ನು ಆಯ್ಕೆಗೊಳಿಸಿ ಶಿಫಾರಸು ಮಾಡಲು ಕ್ರಮಕೈಗೊಳ್ಳಲಾಗಿದೆ ಎಂದರು.
ಸಂಘದ ಮುಖಂಡರಾದ ಸಿ.ಕೆ.ಉದಯಕುಮಾರ್ ಮಾತನಾಡಿದರು.
ಸಂಘ ರಾಜ್ಯ ನಿರ್ದೇಶಕರಾದ ಹೇಮಲತಾ ಮಂಜುನಾಥ್ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಸಂಘದ ಪ್ರಮುಖರಾದ ದಮಯಂತಿ, ಕೆ.ಕೆ..ದೊಡ್ಡಯ್ಯ, ಪುಟ್ಟಸ್ವಾಮಿ, ದೊಡ್ಡಯ್ಯ ಭುವನಗಿರಿ, ಮೋಹನ್ ರಾಜ್ ಭದ್ರಗೋಳ, ಬಿ.ಎಸ್.ಮಂಜುನಾಥ್,, ಗಿರೀಶ್, ರವಿ, ರಾಮೇಗೌಡ, ಹಿತ್ತಲಕೇರಿ ರಮೇಶ್, ಸ್ವಾಮಿ, ಚಂದ್ರ, ಜಗದೀಶ್ ಮತ್ತಿತರರು ಇದ್ದರು.
Back to top button
error: Content is protected !!