ಕುಶಾಲನಗರ, ನ 18: ಚುನಾವಣಾ ಆಯೋಗ ನಿಯಮದಂತೆ ರಾಜ್ಯ ಮಟ್ಟದಲ್ಲಿ ನಡೆಯುತ್ತಿರುವ ಮತದಾರರ ನೋಂದಣಿ ಕಾರ್ಯದ ಹಿನ್ನಲೆಯಲ್ಲಿ ಮತಗಟ್ಟೆಯ ಕೇಂದ್ರಗಳಿಗೆ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿದರು.
ಕೇಂದ್ರದಲ್ಲಿ ನೂತನ ಮತದಾರರ ಪರಿಷ್ಕರಣೆ, ಮಚಿನ ನೊಂದಣಿ ಪ್ರಕ್ರಿಯೆಗಳು ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ವಿವಿಧ ಮತಗಟ್ಟೆ ಕೇಂದ್ರಗಳಲ್ಲಿ ನಡೆಯಿತು.
ಕುಶಾಲನಗರ ತಾಲ್ಲೂಕು ವ್ಯಾಪ್ತಿಯ ವಿವಿಧ ಮತಗಟ್ಟೆಯ ಕೇಂದ್ರಗಳಿಗೆ ಕುಶಾಲನಗರ ತಾಲ್ಲೂಕು ತಹಸೀಲ್ದಾರ್ ಕಿರಣ್ ಗೌರಯ್ಯ ಭೇಟಿ ನೀಡಿ ಮತಗಟ್ಟೆಯ ಅಧಿಕಾರಿಗಳನ್ನು ಭೇಟಿ ಮಾಡಿ ಮತದಾನದ ನೊಂದಣಿಯ ಸಂಪೂರ್ಣವಾದ ಮಾಹಿತಿಯನ್ನು ಪಡೆದರು.
ಈ ಸಂದರ್ಭದಲ್ಲಿ ಕಂದಾಯ ಇಲಾಖೆಯ ಪರಿವೀಕ್ಷಕ ಸಂತೋಷ್, ಶಾಲಾ ಮುಖ್ಯೋಪಾಧ್ಯಾಯ ಯೋಗೇಶ್, ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಡಾ. ಸದಾಶಿವ ಎಸ್. ಪಲ್ಲೇದ್, ಗ್ರಾಮ ಲೆಕ್ಕಾಧಿಕಾರಿ ಗೌತಮ್, ಮತಗಟ್ಟೆಯ ಬಿ.ಇ.ಓ. ಬಾಪು ಮೊದಲಾದವರು ಹಾಜರಿದ್ದರು.
Back to top button
error: Content is protected !!