ಕುಶಾಲನಗರ ನ.09 : ಕುಶಾಲನಗರ ತಾಲ್ಲೂಕಿನ ಹೆಬ್ಬಾಲೆ ಗ್ರಾಮದ ಪುರಾತನ ದೇವಾಲಯ ಶ್ರೀ ಬಸವೇಶ್ವರ ದೇವಾಲಯ ಶಿಥಿಲಗೊಂಡ ಹಿನ್ನೆಲೆಯಲ್ಲಿ ರೂ.1.25 ಕೋಟಿ ವೆಚ್ಚದಲ್ಲಿ ಜೀರ್ಣೋದ್ಧಾರದೊಂದಿಗೆ ಸುಂದರವಾದ ದೇವಾಲಯವನ್ನು ನಿರ್ಮಾಣ ಮಾಡಲಾಗಿದೆ.
ಹೆಬ್ಬಾಲೆ ಶ್ರೀ ಬಸವೇಶ್ವರ ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಸಮಿತಿ ಹಾಗೂ ಗ್ರಾಮಸ್ಥರು ಪುರಾತನ ಬಸವೇಶ್ವರ ದೇಗುಲದ ಇತಿಹಾಸ ಅರಿತು ಕಳೆದ ಎಂಟು ವರ್ಷಗಳ ಹಿಂದೆ ಜೀರ್ಣೋದ್ಧಾರಕ್ಕೆ ಮುಂದಾಗಿದ್ದಾರು. ಇತಿಹಾಸ ಹೊಂದಿರುವ ಈ ದೇವಾಲಯ ಶಿಥಿಲಾವಸ್ಥೆಯಲ್ಲಿದ್ದ ಹಿನ್ನೆಲೆಯಲ್ಲಿ ಹಳೇಯ ಕಟ್ಟಡವನ್ನು ಸಂಪೂರ್ಣ ನೆಲಸಮ ಮಾಡಿ ಅದೇ ಜಾಗದಲ್ಲಿ ಭವ್ಯವಾದ ದೇವಸ್ಥಾನ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು.ದೇವಾಲಯ ಹಿಂದಿನಂತೆ ಮೂಲ ಸ್ವರೂಪದಂತೆ ಗರ್ಭಗುಡಿ ಯಥಾಸ್ಥಿತಿ ಕಾಯ್ದುಕೊಂಡು ಸುತ್ತಲು ನೂತನ ಕಟ್ಟಡ ನಿರ್ಮಾಣ ಮಾಡಿ ಅದರ ಮೇಲ್ಭಾಗದಲ್ಲಿ ಸುತ್ತಲೂ ವಿವಿಧ ದೇವರ ಮೂರ್ತಿಗಳನ್ನು ಕೆತ್ತನೆ ಮಾಡಲಾಗಿದೆ.ದೇವಾಲಯ ನಿರ್ಮಾಣ ಕಾರ್ಯಕ್ಕೆ ದಾನಿಗಳು ವಸ್ತು ರೂಪದಲ್ಲಿ ಹಾಗೂ ಧನ ಸಹಾಯ ಮಾಡಿದ್ದಾರೆ. ಅದೇ ರೀತಿ ಗ್ರಾಮಸ್ಥರು ತನು,ಮನ,ಧನ ನೀಡಿ ದೇವರ ಕೃಫೆಗೆ ಪಾತ್ರರಾಗಿದ್ದಾರೆ.
ಶಿಲ್ಪಿಗಳಾದ ರಮೇಶ್ ಹಾಗೂ ರಾಜು ನೇತೃತ್ವದಲ್ಲಿ ಹತ್ತಾರು ಕಾರ್ಮಿಕರು ಶ್ರಮದಿಂದ ಸುಂದರವಾದ ದೇವಾಲಯ ನಿರ್ಮಾಣಗೊಂಡಿದೆ.ಇವರೊಂದಿಗೆ
ಕುಶಲಕರ್ಮಿ ರಂಜನ್,ಮೂಡ್ಲುಕೊಪ್ಪಲು ರಮೇಶ್, ದಿಲೀಪ್ ಕುಮಾರ್, ಮೇಸ್ತ್ರಿ ರಮೇಶ್,ಜಗದೀಶ್ ಅವರು ದೇವಾಲಯ ನಿರ್ಮಾಣ ಕಾರ್ಯದಲ್ಲಿ ಶ್ರಮಿಸಿದ್ದಾರೆ.
ದೇವಾಲಯ ಜೀರ್ಣೋದ್ಧಾರ ಹಾಗೂ ಪ್ರತಿಷ್ಠಾಪನಾ ಸಮಿತಿ ಅಧ್ಯಕ್ಷ ಎಚ್.ಎನ್..ಬಸವರಾಜು, ಕಾರ್ಯದರ್ಶಿ ಎಚ್.ವಿ.ರಾಜು,ಖಜಾಂಜಿ ಎಚ್.ಟಿ.ನಾರಾಯಣ ನೇತೃತ್ವದಲ್ಲಿ ಎಲ್ಲಾ ನಿರ್ದೇಶಕರು ನೂತನ ದೇವಾಲಯ ನಿರ್ಮಾಣ ಹಾಗೂ ಜೀರ್ಣೋದ್ಧಾರ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು,ಇದೀಗ ದೇವಾಲಯದ ಜೀರ್ಣೋದ್ಧಾರ ಕಾರ್ಯ ಪೂರ್ಣಗೊಂಡಿದೆ.
ನ.15,16 ರಂದು ವಿಗ್ರಹ ಪುನರ್ ಪ್ರತಿಷ್ಠಾಪನೆ : ವಿರಾಜಪೇಟೆ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮಿಗಳ ನೇತೃತ್ವದಲ್ಲಿ ಬಸವೇಶ್ವರ ವಿಗ್ರಹ ಪುನರ್ ಪ್ರತಿಷ್ಠಾಪನೆ ಹಾಗೂ ಕಳಶರೋಹಣ,ಕುಂಬಾಭಿಷೇಕ ನೆರವೇರಲಿದೆ. ನ.15 ರಂದು ಬುಧವಾರ ದೇವಾಲಯದ ಆವರಣದಲ್ಲಿ ಹೋಮ ಹವನಾದಿಗಳು ನಡೆಯಲಿವೆ.ನ.16 ರಂದು ಗುರುವಾರ ಬೆಳಿಗ್ಗೆ ಗಂಗಾಪೂಜೆ,ಗೋಪೂಜೆಯೊಂದಿಗೆ ಮಂಗಳವಾದ್ಯಗಳ ಮೂಲಕ ನೂರಾರು ಮಹಿಳೆಯರು ಪೂರ್ಣಕುಂಭ ಕಳಶದೊಂದಿಗೆ ಆಗಮಿಸಲಿದ್ದಾರೆ.ನಂತರ ವಿಗ್ರಹ ಹಾಗೂ ಕಳಶ ಪ್ರತಿಷ್ಠಾಪನೆ ನಡೆಯಲಿದೆ ಎಂದು ಸಮಿತಿ ಅಧ್ಯಕ್ಷ ಬಸವರಾಜು ತಿಳಿಸಿದ್ದಾರೆ.
ಧಾರ್ಮಿಕ ಕಾರ್ಯಕ್ರಮ : ನ. 16 ರಂದು ಗುರುವಾರ ಬೆಳಿಗ್ಗೆ 11 ಗಂಟೆಗೆ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ದಿವ್ಯ ಸಾನಿಧ್ಯದಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮವನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಲಿದ್ದಾರೆ.ತೊರೆನೂರು ವಿರಕ್ತ ಮಠದ ಮಲ್ಲೇಶಸ್ವಾಮಿ,ಕಿರಿಕೊಡ್ಲಿ ಮಠದ ಸದಾಶಿವಸ್ವಾಮೀಜಿ,ವಿರಾಜಪೇಟೆ ಆತ್ಮಾನಂದಪುರಿ ಸ್ವಾಮೀಜಿ, ಅರೆಮಾದನಹಳ್ಳಿ ಶಿವಸುಜ್ಞಾನ ತೀರ್ಥಸ್ವಾಮೀಜಿ ಅವರು ಭಾಗವಹಿಸುವರು. ಅತಿಥಿಗಳಾದ ಮಾಜಿ ಸಚಿವ ಬಿ.ಎ.ಜೀವಿಜಯ,ಎಂ.ಪಿ.ಅಪ್ಪಚ್ಚುರಂಜನ್, ಉದ್ಯಮಿಗಳಾದ ಆರ್.ಆರ್.ಕುಮಾರ್, ಎಚ್.ಆರ್.ದಿನೇಶ್,ನಾಪಂಡ ಮುತ್ತಪ್ಪ,ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ಹರಪಳ್ಳಿ ರವೀಂದ್ರ, ಎಸಿಪಿ ಎಚ್.ಸಿ.ಜಗದೀಶ್,ಬನಶಂಕರಿ ಸಮುದಾಯ ಭವನದ ಅಧ್ಯಕ್ಷ ಜಿ.ಎಲ್.ರಾಮಪ್ಪ,ಜಿ.ಪಂ.ಮಾಜಿ ಅಧ್ಯಕ್ಷ ಎಚ್.ಎಸ್.ಅಶೋಕ್ ,ಗ್ರಾಮ ಪಂಚಾಯತಿ ಅಧ್ಯಕ್ಷೆ ಅರುಣಾಕುಮಾರಿ ಪಾಲ್ಗೊಳ್ಳಲಿದ್ದಾರೆ ಎಂದು ಸಮಿತಿ ಕಾರ್ಯದರ್ಶಿ ರಾಜು ತಿಳಿಸಿದ್ದಾರೆ.
ನ.16 ರಂದು ಗುರುವಾರ ಮಧ್ಯಾಹ್ನ 2.30 ಗಂಟೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಮಡಿಕೇರಿ ಪ್ರಾಯೋಜಕತ್ವದಲ್ಲಿ ನಾಡಿನ ಸುಪ್ರಸಿದ್ಧ ಕಲಾವಿದರಿಂದ ವೈವಿಧ್ಯಮಯ ಸಾಂಸ್ಕೃತಿಕ ಜಾನಪದ ಕಲಾ ಪ್ರಕಾರಗಳು ಮೂಡಿಬರಲಿವೆ.
Back to top button
error: Content is protected !!