ಕುಶಾಲನಗರ, ನ09: 2015 ರ ಟಿಪ್ಪು ಜಯಂತಿ ಆಚರಣೆ ವಿರೋಧಿಸಿ ನಡೆದ ಹೋರಾಟದಲ್ಲಿ ಪ್ರಾಣತ್ಯಾಗ ಮಾಡಿದ ಕೊಡಗು ಜಿಲ್ಲೆಯ ವಿಶ್ವ ಹಿಂದು ಪರಿಷತ್ ಹಿರಿಯ ನಾಯಕರಾದ ದೇವಪ್ಪಂಡ ಕುಟ್ಟಪ್ಪರವರ ಸ್ಮರಣಾರ್ಥ ನವೆಂಬರ್ 10 ರಂದು ಕೊಡಗು ಜಿಲ್ಲೆಯ ವಿವಿದೆಡೆಯ ದೇವಾಲಯಗಳಲ್ಲಿ ಶಾಂತಿಪೂಜೆ ನಡೆಯಲಿದೆ. ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯ – ಕುಶಾಲನಗರದ ಶ್ರೀ ಗಣಪತಿ ದೇವಾಲಯ ಹಾಗೂ ವೀರಾಜಪೇಟೆ ಬಾಲಾಂಜನೇಯ ದೇವಾಲಯದಲ್ಲಿ ನವೆಂಬರ್ 10 ರ ಶುಕ್ರವಾರ ಬೆಳಿಗ್ಗೆ 9 ಗಂಟೆಗೆ ಹಾಗೂ ಕುಟ್ಟಪ್ಪರವರ ಹುಟ್ಟೂರು ಮಾದಾಪುರದ ಶ್ರೀ ಗಣಪತಿ ದೇವಾಲಯದಲ್ಲಿ ಬೆಳಿಗ್ಗೆ 10 ಗಂಟೆಗೆ ಶಾಂತಿಪೂಜೆ ನಡೆಯಲಿದೆ. ಇದರೊಂದಿಗೆ ಕೊಡಗು ಜಿಲ್ಲೆಯ ವಿವಿಧ ಗ್ರಾ.ಪಂ. ವ್ಯಾಪ್ತಿಯ ದೇವಾಲಯಗಳಲ್ಲಿ ಶಾಂತಿ ಪೂಜೆ ನಡೆಯಲಿದೆ.
Back to top button
error: Content is protected !!