ಕುಶಾಲನಗರ ಅ. 23: ಕೂಡಿಗೆಯ ಕೊಡವ ಕೂಟದ ಮಹಾಸಭೆ ಮತ್ತು ಕೈಲ್ ಪೋಳ್ದ್ ಹಬ್ಬದ ಸಂತೋಷಕೂಟವು ಕೊಡವ ಕೂಟದ ಅಧ್ಯಕ್ಷ ವಾಂಚೀರ ಮನು ನಂಜುಂಡ ಅಧ್ಯಕ್ಷತೆಯಲ್ಲಿ ಮಲ್ಲೆನಹಳ್ಳಿ ಖಾಸಗಿ ಹೋಮ್ ಸ್ಟೇನಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಕುಶಾಲನಗರ ಕೊಡವ ಸಮಾಜದ ಉಪಾಧ್ಯಕ್ಷ ಪುಲಿಯಂಡ ಚಂಗಪ, ಕೂಟದ ಕಾರ್ಯದರ್ಶಿ ಮುಂಡಂಡ ಸತೀಶ್, ಖಜಾಂಚಿ ದೇಯಂಡ ಪೊನ್ನಪ್ಪ, ನಿರ್ದೇಶಕರುಗಳಾದ ಕೊಳುವಂಡ ಮಂದಪ್ಪ, ಪಟ್ಟಡ ಚಿಟ್ಟಿಯಪ್ಪ, ಐಮುಡಿಯಂಡ ರಮೇಶ್, ನಿರ್ದೇಶಕಿಯರಾದ ಉದಿಯಂಡ ದನು ತಿಮ್ಮಯ್ಯ, ಮುಕ್ಕಾಟಿರ ದಿವ್ಯ ದಿಲೀಪ್ ಉಪಸ್ಥಿತರಿದ್ದರು.
ಅಧ್ಯಕ್ಷ ಮನು ನಂಜುಂಡ ಮಾತನಾಡಿ, ನಮ್ಮ ಆಚಾರ ವಿಚಾರಗಳನ್ನು ಉಳಿಸಿ ಬೆಳೆಸುವ ಜವಬ್ದಾರಿ ನಮ್ಮೆಲ್ಲರ ಕರ್ತವ್ಯ. ನಮ್ಮ ಜಮ್ಮ ಜಾಗವನ್ನು ಪರಭಾರೆ ಮಾಡಬೇಡಿ. ಅದನ್ನ ಉಳಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಕೆಲಸ ಪೋಷಕರ ಕರ್ತವ್ಯ. ಜನಾಂಗದವರು ಎಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದರು.
ಮುಖ್ಯ ಅತಿಥಿಗಳಾದ ಪುಲಿಯಂಡ ಚಂಗಪ ಮಾತನಾಡಿ, ನಾವು ಹಿರಿಯರಿಗೆ ಗೌರವ ಕೊಡುವುದನ್ನು ರೂಡಿಸಿಕೊಳ್ಳಬೇಕು. ಸೇನೆಯಲ್ಲಿ ನಮ್ಮ ಯುವಕರು ಇತ್ತೀಚಿನ ದಿನಗಳಲ್ಲಿ ಕಡಿಮೆ ಪ್ರಮಾಣದಲ್ಲಿ ಸೇರ್ಪಡೆ ಆಗುತ್ತಿರುವುದು ಬೇಸರದ ವಿಷಯ. ಮುಂದಿನ ದಿನಗಳಲ್ಲಿ ಶಿಕ್ಷಣದ ಜೊತೆಗೆ ದೇಶ ಸೇವೆಯಲ್ಲಿ ಯುವಕ ತಮ್ಮನ್ನು ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ದೇಯಂಡ ಸವಿ ಸ್ವಾಗತಿಸಿ, ಕೊಳುವಂಡ ಮಂದಪ್ಪ ವಂದಿಸಿದರು.
Back to top button
error: Content is protected !!