ಕುಶಾಲನಗರ, ಜು 09: ಕುಶಾಲನಗರದ ಇನ್ನರ್ ವೀಲ್ ಕ್ಲಬ್ ನ 2023-24ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ರೋಟರಿ ಸಭಾಂಗಣದಲ್ಲಿ ನಡೆಯಿತು.
ನೂತನ ಸಾಲಿನ ಅಧ್ಯಕ್ಷರಾಗಿ ನೇಹ ಜಗದೀಶ್, ಕಾರ್ಯದರ್ಶಿಯಾಗಿ ಜಾಸ್ಮಿನ್ ಪ್ರಕಾಶ್ ಅಧಿಕಾರ ವಹಿಸಿಕೊಂಡರು.
ಇನ್ನರ್ ವೀಲ್ ಕ್ಲಬ್ ಪೂರ್ವ ಅಧ್ಯಕ್ಷೆ ಸುಪ್ರಿತಾ ರವಿ ಪದಗ್ರಹಣ ಕಾರ್ಯಕ್ರಮ ನೆರವೇರಿಸಿದರು.
ಕ್ಲಬ್ ಉಪಾಧ್ಯಕ್ಷೆ ಚಿತ್ರಾ ರಮೇಶ್ ಹಿಂದಿನ ಸಾಲಿನ ವರದಿ ವಾಚಿಸಿದರು.
ಕುಶಾಲನಗರ ರೋಟರಿ ಸಂಸ್ಥೆ ಅಧ್ಯಕ್ಷೆ ಸುನಿತಾ ಮಹೇಶ್ ಅವರು ಇನ್ನರ್ ವೀಲ್ ಕ್ಲಬ್ ನ ಇ-ಬುಲೆಟಿನ್ ಬಿಡುಗಡೆ ಮಾಡಿದರು.
ಕ್ಲಬ್ ನಿಕಟಪೂರ್ವ ಅಧ್ಯಕ್ಷೆ ಅಶ್ವಿನಿ ರೈ ಮಾತನಾಡಿ, ತಮ್ಮ ಅವಧಿಯ ಕಾರ್ಯಚಟುವಟಿಕೆ ಬಗ್ಗೆ ಮಾತನಾಡಿದರು. ಎಲ್ಲರ ಸಹಕಾರ, ಸಂಘಟನೆಯಿಂದ ಉತ್ತಮ ಕಾರ್ಯಗಳನ್ನು ಹಮ್ಮಿಕೊಳ್ಳಲು ಸಾಧ್ಯವಾಯಿತು ಎಂದು ತಿಳಿಸಿದರು.
ಅಧಿಕಾರ ಸ್ವೀಕರಿಸಿ ಮಾತನಾಡಿದ ನೇಹಾ ಜಗದೀಶ್, ಕ್ಲಬ್ ನ ಧ್ಯೇಯಗಳನ್ನು ಈಡೇರಿಸುವ ನಿಟ್ಟಿನಲ್ಲಿ ನಮ್ಮೆಲ್ಲರ ನಿಸ್ವಾರ್ಥ ಸೇವೆ ಸಮಾಜಕ್ಕೆ ಅಗತ್ಯವಿದೆ. ಮಹಿಳಾ ಸಬಲೀಕರಣ, ಪರಿಸರ ಸಂರಕ್ಷಣೆ, ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನಮ್ಮ ಸೇವೆ ಒದಗಿಸಲು ಎಲ್ಲರೂ ಒಗ್ಗೂಡಿ ಶ್ರಮಿಸೋಣ ಎಂದರು.
ಪದಗ್ರಹಣ ಕಾರ್ಯ ನೆರವೇರಿಸಿ ಸುಪ್ರಿತಾ ರವಿ ಮಾತನಾಡಿದರು.
ಈ ಸಂದರ್ಭ ಕ್ಲಬ್ ನಿಕಟಪೂರ್ವ ಖಜಾಂಚಿ ದೀಪ ಪೂಜಾರಿ, ಕುಶಾಲನಗರ ರೋಟರಿ ಸಂಸ್ಥೆ ಕಾರ್ಯದರ್ಶಿ ಶಿರ್ಲಿ
ಸಂತೋಷ್, ರೋಟೆರಿಯನ್ ನವೀನ್, ಸೋಮವಾರಪೇಟೆ ಇನ್ನರ್ ವೀಲ್ ಕ್ಲಬ್ ಕಾರ್ಯದರ್ಶಿ ತನ್ಮಯ್, ಮಾಜಿ ಸೈನಿಕ ಜಗದೀಶ್, ಸ್ತ್ರೀತಜ್ಞೆ ಡಾ.ಪ್ರತಿಭಾ, ಸರಿಗಮಪ ಸಾಧಕಿ ಪ್ರಗತಿ ಬಡಿಗೇರ್, ಶಿಕ್ಷಕ ಬಸವರಾಜ ಬಡಿಗೇರ್
ಸೇರಿದಂತೆ ಕ್ಲಬ್ ಪ್ರಮುಖರು ಇದ್ದರು.
Back to top button
error: Content is protected !!