ಕುಶಾಲನಗರ, ಜೂ 01:ಕರ್ನಾಟಕ ಸರ್ಕಾರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 37 ವರ್ಷಗಳ ಸುದೀರ್ಘಕಾಲ ಉಪನ್ಯಾಸಕರಾಗಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ವಯೋ ನಿವೃತ್ತಿ ಹೊಂದಿದ ಸತೀಶ್ ಬಾಬು ಅವರು ನಿವೃತ್ತಿ ಹೊಂದಿದರು.
ಕಾಲೇಜಿನ ಉಪನ್ಯಾಸಕರಿಂದ ಇವರಿಗೆ ಬೀಳ್ಕೊಡುಗೆ ಸಮಾರಂಭವನ್ನು ಏರ್ಪಡಿಸಿದ್ದು ಈ ಸಮಾರಂಭದಲ್ಲಿ ಕೊಡಗು ಜಿಲ್ಲಾ ಪದವಿ ಪೂರ್ವ ಕಾಲೇಜುಗಳು ಉಪ ನಿರ್ದೇಶಕರಾದ ಶ್ರೀಯುತ ಪುಟ್ಟರಾಜು ಸರ್ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿ ಕೊಡಗು ಜಿಲ್ಲಾ ಉಪನ್ಯಾಸಕ ಸಂಘದ ಅಧ್ಯಕ್ಷರಾದ ಶ್ರೀಯುತ ಪಿಲೀಪ್ ವಾಸ್ ಹಾಗೂ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದಂತಹ ಶ್ರೀಯುತ ಪರಮೇಶ್ವರಪ್ಪ ರವರು ಉಪಸ್ಥಿತರಿದ್ದರು ಕಾಲೇಜಿನ ಎಲ್ಲಾ ಉಪನ್ಯಾಸಕರು ಹಾಗೂ ಪ್ರೌಢಶಾಲಾ ವಿಭಾಗದ ಎಲ್ಲಾ ಶಿಕ್ಷಕರು ಸೇರಿ ಪ್ರಾಚಾರ್ಯದಂತಹ ಶ್ರೀಯುತ ಸತೀಶ್ ಬಾಬು ಸರ್ ಹಾಗೂ ಅವರ ಕುಟುಂಬಸ್ಥರನ್ನು ಹೃತ್ಪೂರ್ವಕವಾಗಿ ಅಭಿನಂದಿಸಿ ಬೀಳ್ಕೊಡಲಾಯಿತು ಶ್ರೀಯುತ ಸತೀಶ್ ಬಾಬು ಸರ್ ಅವರು ಕಾಲೇಜಿನ ಪ್ರಾಚಾರ್ಯರ ಜವಾಬ್ದಾರಿಯನ್ನು ಕಾಲೇಜಿನ ಹಿರಿಯ ಉಪನ್ಯಾಸಕರಾದ ಶ್ರೀಯುತ ನಾಗೇಶ್ ಅವರಿಗೆ ಜವಾಬ್ದಾರಿಯನ್ನು ಹಸ್ತಾಂತರಿಸುವುದರೊಂದಿಗೆ ಬೀಳ್ಕೊಡುಗೆ ಸಮಾರಂಭವನ್ನು ಯಶಸ್ವಿಗೊಳಿಸಲಾಯಿತು.
Back to top button
error: Content is protected !!