ಕುಶಾಲನಗರ, ಏ 27:ಐಎಂಪಿ ಪಕ್ಷದ ಮಡಿಕೇರಿ ಕ್ಷೇತ್ರ ಅಭ್ಯರ್ಥಿ ರಶೀದ ಬೇಗಂ ಕುಶಾಲನಗರ ವ್ಯಾಪ್ತಿಯಲ್ಲಿ ಮತಯಾಚನೆ ಮಾಡಿದರು.
ಪಕ್ಷದ ರಾಷ್ಟ್ರಾಧ್ಯಕ್ಷ ಅಬ್ದುಲ್ ಸುಬಾನ್ ಹಾಗೂ ನಾಯಕಿ, ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ಮತ್ತು ಕಾರ್ಯಕರ್ತರೊಂದಿಗೆ ಮನೆಮನೆಗೆ ತೆರಳಿ ಮತಯಾಚಿಸಿದರು.
ಈ ಸಂದರ್ಭ ಮಾತನಾಡಿ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಸಂವಿಧಾನಬದ್ದ, ಭಯಮುಕ್ತ ಸಮಾಜ ನಿರ್ಮಾಣ ನಮ್ಮ ಧ್ಯೇಯ. ಹಣಬಲ, ಜಾತಿ ಬಲದ ನಡುವೆ ಬಡವರಿಗೆ ಅವಕಾಶ ದೊರಕುತ್ತಿಲ್ಲ. ಈ ನಿಟ್ಟಿನಲ್ಲಿ ಐಎಂಪಿ ಪಕ್ಷ ಸ್ವತಃ ಹಣ ವ್ಯಯಿಸಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಡವರ ಪರವಾದ ಸರಕಾರ ರಚನೆಯಾಗಬೇಕು ಎಂಬುದೇ ನಮ್ಮಪಕ್ಷದ ಆಶಯ ಎಂದರು.
ಪಕ್ಷದ ಸಂಸ್ಥಾಪಕ ಅಬ್ದುಲ್ ಸುಬಾನ್ ಮಾತನಾಡಿ, ಬಡವರ ಪರವಾಗಿ ಒಂದು ಪಕ್ಷ ಬೇಕೆಂಬ ಉದ್ದೇಶದಿಂದ ಈ ಪಕ್ಷ ಸ್ಥಾಪಿಸಲಾಗಿದೆ. ಒಟ್ಟು 32 ಮಂದಿಗೆ ಉಚಿತ ಟಿಕೇಟ್ ನೀಡಲಾಗಿದ್ದು, ಜನಪರ ಕಾಳಜಿಯುಳ್ಳ, ಸೇವೆ ಸಲ್ಲಿಸುತ್ತಿರುವವರನ್ನು ಗುರುತಿಸಿ ಅಭ್ಯರ್ಥಿಯಾಗಿ ಮಾಡಲಾಗಿದೆ ಎಂದರು.
ಕ್ಷೇತ್ರದ ಅಭ್ಯರ್ಥಿ ರಶೀದಾ ಬೇಗಂ ಮಾತನಾಡಿ, ಪಕ್ಷದೊಂದಿಗೆ ಕೈಜೋಡಿಸುವಂತೆ ಮನವಿ ಮಾಡಿದರು.
ಈ ಸಂದರ್ಭ ಪಕ್ಷದ ಪ್ರಮುಖರು, ಕಾರ್ಯಕರ್ತರು ಇದ್ದರು.
Back to top button
error: Content is protected !!