ರಾಜಕೀಯ

ಕುಶಾಲನಗರ ಭಾಗದಲ್ಲಿ ಶಾಸಕ ಅಪ್ಪಚ್ಚುರಂಜನ್ ಅಬ್ಬರದ ಪ್ರಚಾರ

ಕುಶಾಲನಗರ, ಏ 25: ಮಡಿಕೇರಿ ಕ್ಷೇತ್ರದ ಅಭಿವೃದ್ದಿಗೆ ಬಿಜೆಪಿ ಸರಕಾರ 1800 ಕೋಟಿಯಷ್ಟು ಅನುದಾನ‌ ಒದಗಿಸಿದ್ದು, ಕೊಡಗು ಜಿಲ್ಲೆ‌ ಮತ್ತಷ್ಟು ಅಭಿವೃದ್ದಿ ಹೊಂದಲು‌ ಮತ್ತೊಮ್ಮೆ‌ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಶಾಸಕ ಅಪ್ಪಚ್ಚುರಂಜನ್ ಮನವಿ‌ ಮಾಡಿದರು.

ಕುಶಾಲನಗರದ ಕಾರು ನಿಲ್ದಾಣದಲ್ಲಿ ನಡೆದ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 138 ಕೋಟಿ ರೂ ಮಳೆಹಾನಿ‌ ಪರಿಹಾರ ಒದಗಿಸಲಾಗಿದೆ.
ವಿವಿಧ ರೀತಿಯ ಜನಪರ ಯೋಜನೆಗಳನ್ನು ಜಾರಿಗೊಳಿಸಿದ‌ ಕೀರ್ತಿ‌ ಬಿಜೆಪಿ ಸರಕಾರಕ್ಕಿದೆ. ಕೊಡಗಿನಲ್ಲಿ ನಿರಾಶ್ರಿತರಿಗೆ ಆಶ್ರಯ ಮನೆಗಳು, ಪಟ್ಟೆ ವಿತರಣೆ, ಕೊಡಗು ವಿವಿ, ಮೆಡಿಕಲ್ ಕಾಲೇಜು, ಪ್ರವಾಹ ನಿರ್ವಹಣೆ, ಗುಡ್ಡ ಕುಸಿತದಂತಹ ಪ್ರಕರಣಗಳ ಸಂದರ್ಭ ಸಂರಕ್ಷಣಾ ಕಾರ್ಯ ಕೈಗೊಂಡು ಅಗತ್ಯ ರೀತಿಯಲ್ಲಿ‌ ಸ್ಪಂದಿಸಲಾಗಿದೆ ಎಂದರು.
ಕೊಡಗು ಜಿಲ್ಲಾ ಬಿಜೆಪಿ‌ ಮಾಜಿ ಅಧ್ಯಕ್ಷ
ಬಿ.ಬಿ.ಭಾರತೀಶ್ ಮಾತನಾಡಿ, ಈ ಬಾರಿಯ ಚುನಾವಣೆ ಸ್ವಾಭಿಮಾನ‌ದ ಚುನಾವಣೆ. ಜಿಲ್ಲೆಯ ಸಂಸ್ಕೃತಿ ಆಚಾರ ವಿಚಾರಗಳನ್ನು ತಿಳಿದಿರುವ ಅಭ್ಯರ್ಥಿಯನ್ನು ಬೆಂಬಲಿಸಬೇಕಿದೆ. ಸಾಮಾನ್ಯ ಮತದಾರನಿಗೆ ಸರಕಾರದ ಯೋಜನೆಗಳು ತಲುಪಿವೆ. ರಾಜ್ಯದ ಜನತೆಗೆ ಒದಗಿಸಬೇಕಾದ ಯೋಜನೆಗಳ ಬಗ್ಗೆ ಮಾತನಾಡಬೇಕಿದೆ ಹೊರತು ಸರಕಾರ ತಂದಿರುವ ಯೋಜನೆಗಳನ್ನು ಕಡಿತಗೊಳಿಸುವ ಬಗ್ಗೆ ವಿರೋಧ ಪಕ್ಷ ಮಾತಾಡುತ್ತಿದೆ. ಒಂದು ವರ್ಗದ ಓಲೈಕೆಗೆ ಶ್ರಮಿಸುತ್ತಿವೆ.
ಜಾತಿಗಳನ್ನು ಒಡೆದು ಆಳುವ ಚಿಂತನೆ ಕಾಂಗ್ರೆಸಿನದು ಎಂದು ಆರೋಪಿಸಿದರು.
ರಂಗಾಯಣ ನಿರ್ದೇಶಕ ಅಡ್ಡಂಡ ಕಾರ್ಯಪ್ಪ ಮಾತನಾಡಿ, ಇಸ್ಲಾಮಿಕ್ ರಾಷ್ಟ್ರ ನಿರ್ಮಾಣ ಕನಸು‌ ಕನಸಾಗಿಯೇ ಉಳಿಯುವಂತಾಗಬೇಕು. ಮನೆಯೊಳಗೆ, ಶಾಂತಿ ನೆಮ್ಮದಿಗಾಗಿ ಬಿಜೆಪಿ ಬೆಂಬಲಿಸಬೇಕಿದೆ. ನಕ್ಸಲ್, ಮಾವೋ ಮತ್ತಿತರ ಉಗ್ರ ಸಂಘಟನೆಗಳಿಗೆ‌ ಕಾಂಗ್ರೆಸ್ ಬೆಂಬಲ ನೀಡುತ್ತಿದೆ. ಜಿಹಾದಿ ಸರಕಾರ ಬೇಡ, ರಾಷ್ಟ್ರವಾದಿ ಸರಕಾರ ತರಲು ಮತದಾರ ಚಿಂತಿಸಬೇಕಿದೆ ಎಂದರು.
ಇದೇ ಸಂದರ್ಭ ಗುಜರಾತ್ ಶಾಸಕ ಪ್ರದ್ಯುಮ್ನ ವಜ, ಲೋಕೇಶ್ ಮಾತನಾಡಿದರು.
ಎಂಎಲ್ಸಿ ಸುಜಾ ಕುಶಾಲಪ್ಪ, ಪುರಸಭೆ ಅಧ್ಯಕ್ಷ ಜೈವರ್ಧನ್, ಸದಸ್ಯ ಅಮೃತ್‌ರಾಜ್, ನಗರಾಧ್ಯಕ್ಷ ಉಮಾಶಂಕರ್ ಮತ್ತಿತರರು ಇದ್ದರು.

Related Articles

Leave a Reply

Your email address will not be published. Required fields are marked *

Back to top button
error: Content is protected !!