ಕುಶಾಲನಗರ, ಮಾ 24: ಕುಶಾಲನಗರ ಪುರಸಭೆ ವ್ಯಾಪ್ತಿಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಅಪ್ಪಚ್ಚುರಂಜನ್ ಚಾಲನೆ ನೀಡಿದರು.
ರೂ 2.87 ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಪುರಸಭೆ ವಾಣಿಜ್ಯ ಮಳಿಗೆಗಳು, ಕಸ ವಿಲೇವಾರಿಗೆ ರೂ 28 ಲಕ್ಷ ವೆಚ್ಚದಲ್ಲಿ ಖರೀದಿಸಿರುವ ಮೂರು ನೂತನ ಟ್ರಾಕ್ಟರ್ ಹಾಗೂ ಗುಂಡುರಾವ್ ಬಡಾವಣೆಯಲ್ಲಿ 43 ಲಕ್ಷ ವೆಚ್ಚದಲ್ಲಿ ಅಭಿವೃದ್ಧಿಪಡಿಸಿರುವ ರಸ್ತೆಯನ್ನು ಶಾಸಕರು ಉದ್ಘಾಟಿಸಿದರು.
ನಂತರ ಮಾತನಾಡಿದ ಅವರು, ಕುಶಾಲನಗರ ಪುರಸಭೆಯಾದ ಬಳಿಕ ನೆರೆಯ ಮುಳ್ಳುಸೋಗೆ ಹಾಗೂ ಮಾದಾಪಟ್ಟಣ ಭಾಗಗಳಿಗೂ ತಮ್ಮ ಸೇವೆ ವಿಸ್ತರಿಸಬೇಕಿದೆ. ಕ್ಲೀನ್ ಸಿಟಿ ಉದ್ದೇಶದಿಂದ ಕಸ ವಿಲೇವಾರಿಗೆ ಹೆಚ್ಚುವರಿ ಟ್ರಾಕ್ಟರ್ ಗಳನ್ನು ಖರೀದಿಸಲಾಗಿದೆ. ನಗರೋತ್ಝಾನ ಯೋಜನೆ ಕಾಮಗಾರಿಗಳು ಕೂಡ ಪ್ರಗತಿಯಲ್ಲಿದ್ದು ಉದ್ಘಾಟನೆಗೊಂಡ ವಾಣಿಜ್ಯ ಮಳಿಗೆಗಳನ್ನು ನಿಯಮಾನುಸಾರ ಟೆಂಡರ್ ಮೂಲಕ ಬಾಡಿಗೆಗೆ ಒದಗಿಸಲಾಗುವುದು ಎಂದರು.
ಪುರಸಭೆ ಅಧ್ಯಕ್ಷ ಬಿ.ಜೈವರ್ಧನ್ ಮಾತನಾಡಿ, ಪುರಸಭೆ ವಾಣಿಜ್ಯ ಸಂಕೀರ್ಣ ನಿರ್ಮಾಣ ಯೋಜನೆಯಲ್ಲಿ ಪಾತ್ರ ವಹಿಸಿದ ಈ ಹಿಂದಿನ ಮತ್ತು ಪ್ರಸಕ್ತ ಆಡಳಿತ ಮಂಡಳಿ, ಅಧಿಕಾರಿ ವರ್ಗದವರಿಗೆ ಧನ್ಯವಾದ ಸಲ್ಲಿಸಿ ಶಾಸಕರ ಸಹಕಾರವನ್ನು ವಿಶೇಷವಾಗಿ ಸ್ಮರಿಸಿದರು.
ಈ ಸಂದರ್ಭ ಪುರಸಭೆ ಉಪಾಧ್ಯಕ್ಷೆ ಸುರಯ್ಯಭಾನು, ಮುಖ್ಯಾಧಿಕಾರಿ ಶಿವಪ್ಪನಾಯಕ್, ಕಾನೂನು ಸಲಹೆಗಾರ ನಾಗೇಂದ್ರ ಬಾಬು ಸೇರಿದಂತೆ
ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಅಧಿಕಾರಿ, ಸಿಬ್ಬಂದಿ ವರ್ಗದವರು ಇದ್ದರು.
Back to top button
error: Content is protected !!