ಕುಶಾಲನಗರ, ಜ 25: ನೆಲ್ಯಹುದಿಕೇರಿ ಗ್ರಾಮ ಪಂಚಾಯತಿಯ PDO ಮೇಲಿನ ಹಲ್ಲೆ ಪ್ರಕರಣವನ್ನು ಕೊಡಗು ಕ.ರಾ.ಪ್ರಾ.ಶಾ.ಶಿ ಸಂಘ(ರಿ)ದ ಅಧ್ಯಕ್ಷ ಹೆಚ್.ಎನ್.ಮಂಜುನಾಥ್ ತೀವ್ರವಾಗಿ ಗ ಖಂಡಿಸಿದ್ದಾರೆ.
ಸರಕಾರಿ ನೌಕರರಿಗೆ ಭದ್ರತೆ ಇಲ್ಲವಾಗಿದೆ.ಇದೇ ರೀತಿ ಪ್ರಕರಣಗಳು ಮುಂದುವರಿದಲ್ಲಿ ನೌಕರರು ಯಾವ ರೀತಿ ಕೆಲಸ ಕಾರ್ಯಗಳನ್ನು ನಿರ್ವಹಿಸುವುದು ಎಂದು ಆತಂಕ ಉಂಟಾಗಿದೆ.ಒಂದೆಡೆ ಅಧಿಕಾರಿಗಳು ಸೂಚಿಸಿದ ಕೆಲಸ ಕಾರ್ಯಗಳನ್ನು ನಿರ್ವಹಿಸ ಬೇಕಾದ ಜವಾಬ್ದಾರಿ ನೌಕರರ ಹೆಗಲ ಮೇಲಿದ್ದರೆ ಸಾರ್ವಜನಿಕರ ಆಕ್ರೋಶಕ್ಕೂ ಬಲಿಯಾಗುವಂತಹ ಘಟನೆಗಳು ಜರುಗುತ್ತಿರುವುದು ಕೆಳಹಂತದ ನೌಕರರಿಗೆ ಸೇವಾ ಭದ್ರತೆ ಇಲ್ಲದಂತಾಗಿದ್ದು ಅವಮಾನದ ಜೊತೆಗೆ ಮಾನಸಿಕವಾಗಿ ದೈಹಿಕವಾಗಿ ಕುಗ್ಗುವಂತಹ ಸ್ಥಿತಿ ನಿರ್ಮಾಣವಾಗಿರುವುದು ಖಂಡಾನಾರ್ಹ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಅಧ್ಯಕ್ಷನಾಗಿ ಇಂತಹ ಹೇಯ ಕೃತ್ಯವನ್ನು ಖಂಡಿಸುತ್ತಾ ಹಿರಿಯ ಅಧಿಕಾರಿಗಳು ತಮ್ಮ ಕೆಳಹಂತದ ನೌಕರರಿಗೆ ಭದ್ರತೆ ಒದಗಿಸುವಂತೆ ಒತ್ತಾಯಿಸುವುದಲ್ಲದೆ ಸರಕಾರಿ ನೌಕರರ ಸಂಘ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕೆಂದು ಈ ಮೂಲಕ ಒತ್ತಾಯಿಸಿದ್ದಾರೆ.
Back to top button
error: Content is protected !!