ಕುಶಾಲನಗರ, ನ 21: ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಸೀಗೆ ಹೊಸೂರು ಸಮೀಪದ ಜೇನುಕಲ್ಲು ಬೆಟ್ಟದ ಗ್ರಾಮದಲ್ಲಿರುವ ಶ್ರೀ ಉದ್ಭವ ಕಾಡು ಬಸವಣ್ಣ ದೇವರ ವಾರ್ಷಿಕ ಪೂಜ್ಯೋತ್ಸವ ಶ್ರದ್ಧಾಭಕ್ತಿ, ಹೋಮ ಹವನ ಗಳ ಮೂಲಕ ದೇವಾಲಯ ಆವರಣದಲ್ಲಿ ನಡೆಯಿತು.
ವಾರ್ಷಿಕ ಪೂಜೆಯ ಅಂಗವಾಗಿ ಬೆಳಿಗ್ಗಿನಿಂದ ವಿಶೇಷ ಪೂಜೆ ,ರುದ್ರಹೋಮ ಅಭಿಷೇಕ ಪೂಜೆ ಸೇರಿದಂತೆ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಧ್ಯಾಹ್ನ 1 ಗಂಟೆಗೆ ಮಹಾಮಂಗಳಾರತಿ ನಡೆದು ಆಗಮಿಸಿದ್ದ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು
ಈ ಸಂದರ್ಭದಲ್ಲಿ ಶ್ರೀ ಉದ್ಭವ ಕಾಡು ಬಸವಣ್ಣ ದೇವಾಲಯ ಸಮಿತಿಯ ಅಧ್ಯಕ್ಷ ಕೆ ಸಿ ನಂಜುಂಡ ಸ್ವಾಮಿ, ಕಾರ್ಯದರ್ಶಿ ಬಸವರಾಜ್ ಸದಸ್ಯರಾದ ಅಪ್ಪಜಿಗೌಡ, ರವಿ, ಚಾಮಿ, ದೇವರಾಜ್ ಸೇರಿದಂತೆ ಸೀಗೆಹೊಸೂರು, ಜೇನುಕಲ್ಲುಬೆಟ್ಟ, ಭುವನಗಿರಿ ಗ್ರಾಮಗಳ ನೂರಾರು ಮಂದಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
Back to top button
error: Content is protected !!